ನವದೆಹಲಿ: ಅಂತರ ರಾಷ್ಟ್ರೀಯ ಕ್ರಿಕೆಟ್‌ಗೆ ಶನಿವಾರ ವಿದಾಯ ಹೇಳಿದ್ದ ಶಿಖರ್ ಧವನ್ ಅವರು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ಗೆ (ಎಲ್‌ಎಲ್‌ಸಿ) ಸೋಮವಾರ ಸೇರ್ಪಡೆಯಾದರು.
‘ನನ್ನ ದೇಹ ಈಗಲೂ ಆಡಲು ಶಕ್ತವಾಗಿದೆ. ಕ್ರಿಕೆಟ್ ಆಟವನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ನಾನು ನನ್ನ ಕ್ರಿಕೆಟ್ ಸ್ನೇಹಿತರ ಜೊತೆಯಗಲು ಕಾತರದಿಂದ ಇದ್ದೇನೆ. ನನ್ನ ಅಭಿಮಾನಿಗಳಿಗೆ ರಂಜನೆ ನೀಡುವುದನ್ನು ಮುಂದುವರಿಸುವೆ. ಹೊಸ ನೆನಪುಗಳಿಗೆ ದಾರಿಮಾಡಿಕೊಡುವೆ’ ಎಂದು
ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
38 ವರ್ಷ ವಯಸ್ಸಿನ ಎಡಗೈ ಆಟಗಾರನಾಗಿರುವ ಧವನ್ 34 ಟೆಸ್ಟ್, 167 ಏಕದಿನ ಮತ್ತು 68 ಟಿ20 ಪಂದ್ಯಗಳನ್ನು ಆಡಿದ್ದು ಒಟ್ಟು 12,286 ರನ್ ಕಲೆಹಾಕಿದ್ದಾರೆ. ಲೆಜೆಂಡ್ಸ್ ಲೀಗ್ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.