500ನೇ ಪಂದ್ಯದಲ್ಲಿ ಮಿಂಚಿದ ಮಹಿ

7

500ನೇ ಪಂದ್ಯದಲ್ಲಿ ಮಿಂಚಿದ ಮಹಿ

Published:
Updated:

ಕಾರ್ಡಿಫ್: ಭಾರತ ತಂಡದ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ದೋನಿ ಅವರು ಶುಕ್ರವಾರ ತಮ್ಮ ವೃತ್ತಿಜೀವನದ 500ನೇ ಅಂತರರಾಷ್ಟ್ರೀಯ ಪಂದ್ಯ ಆಡಿದರು.

ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಅವರು (32;24ಎ, 5ಬೌಂ) ತಂಡವು ಗೌರವ ಮೊತ್ತ ಗಳಿಸಲು ಕಾರಣರಾದರು.

ಅವರು 90 ಟೆಸ್ಟ್‌, 318 ಏಕದಿನ ಮತ್ತು 92 ಟ್ವೆಂಟಿ–20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಭಾರತದ ಸಚಿನ್ ತೆಂಡೂಲ್ಕರ್ (664) ಮತ್ತು ರಾಹುಲ್ ದ್ರಾವಿಡ್ (509) ಅವರ ನಂತರ 500ರ ಗಡಿ ಮುಟ್ಟಿದ ಆಟಗಾರನಾಗಿ ದೋನಿ ದಾಖಲೆ ಬರೆದಿದ್ದಾರೆ.

2004ರಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಪಂದ್ಯ ಮತ್ತು 2005ರಲ್ಲಿ ಅವರು ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದರು. 2006ರಲ್ಲಿ ಮೊದಲ ಬಾರಿ ಟ್ವೆಂಟಿ–20 ಪಂದ್ಯವನ್ನು ಆಡಿದ್ದರು. ಟ್ವೆಂಟಿ–20 ಮಾದರಿಯಲ್ಲಿ  ಅತಿ ಹೆಚ್ಚು ಸ್ಟಂಪಿಂಗ್ (33) ಮಾಡಿದ ದಾಖಲೆಯನ್ನು ಅವರು ಮೂರು ದಿನಗಳ ಹಿಂದೆ ಮಾಡಿದ್ದರು.

ದೋನಿ ಅವರು 2014ರಲ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಆಡುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !