ರಣಜಿಯಲ್ಲಿ ಧೋನಿ ಆಡಲಿ: ಅಮರನಾಥ್

7

ರಣಜಿಯಲ್ಲಿ ಧೋನಿ ಆಡಲಿ: ಅಮರನಾಥ್

Published:
Updated:

ನವದೆಹಲಿ: ಮಹೇಂದ್ರಸಿಂಗ್ ಧೋನಿ ಮತ್ತು  ಹಿರಿಯ ಆಟಗಾರರು ಅವರು ರಣಜಿ ಟ್ರೋಫಿ ಕ್ರಿಕೆಟ್  ಪಂದ್ಯಗಳಲ್ಲಿ ಆಡಬೇಕು. ಅಲ್ಲಿ ಮಾಡುವ ಸಾಧನೆಯ ಆಧಾರದಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ಸಮತಿಯ ಗಮನ ಸೆಳೆಯಬೇಕು ಎಂದು ಹಿರಿಯ ಆಟಗಾರ ಮೊಹಿಂದರ್ ಅಮರನಾಥ್ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆಡಿದ ಭಾರತ ತಂಡದಿಂದ ಧೋನಿ ಅವರನ್ನು ಕೈಬಿಡಲಾಗಿತ್ತು. ಮುಂದಿನ ತಿಂಗಳು ನಡೆಯಲಿರುವ ಏಕದಿನ ಸರಣಿಯಲ್ಲಿ  ಅವರು ಆಡುವ ಸಾಧ್ಯತೆ ಇದೆ.  ಈ ಕುರಿತು ಅಮರನಾಥ್ ಪ್ರತಿಕ್ರಿಯಿಸಿದರು. ಅವರು ಬುಧವಾರ ಇಲ್ಲಿ ನಡೆದ ಪೆರ್ನೊ ಇಂಡಿಯಾ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪ್ರತಿಯೊಬ್ಬ ಆಟಗಾರನಿಗೂ ವಿಭಿನ್ನವಾದ ಪ್ರತಿಭೆ ಇರುತ್ತದೆ. ಆದರೆ,  ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಬಯಸುವ ಹಿರಿಯ ಆಟಗಾರರು ತಮ್ಮ ತವರು ರಾಜ್ಯದ ತಂಡಗಳಲ್ಲಿ ಉತ್ತಮ ಸಾಧನೆ ಮಾಡಬೇಕು. ಬಿಸಿಸಿಐ ಈ ನಿಯಮವನ್ನು ಜಾರಿಗೆ ತರಬೇಕು’ ಎಂದು ಅಮರನಾಥ್ ಅಭಿಪ್ರಾಯಪಟ್ಟಿದ್ದಾರೆ.

ಧೋನಿ, ಶಿಖರ್ ಧವನ್ ಅವರು ದೇಶಿ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಈಚೆಗೆ ಸುನಿಲ್ ಗಾವಸ್ಕರ್ ಕೂಡ ಹೇಳಿದ್ದರು.

ಈ ಸಂದರ್ಭದಲ್ಲಿ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್, ಐಸಿಸಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡೇವಿಡ್ ರಿಚರ್ಡಸನ್, ಪೆರ್ನೊ ರಿಕಾರ್ಡ್‌ ಇಂಡಿಯಾದ ಅಧಿಕಾರಿ ಗಿಲೇಮ್ ಗಿರಾರ್ಡ್ ರೆಡೆಟ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !