ಬುಧವಾರ, ನವೆಂಬರ್ 20, 2019
20 °C

38ನೇ ವಸಂತಕ್ಕೆ ಕಾಲಿಟ್ಟ ಮಹೇಂದ್ರ ಸಿಂಗ್ ದೋನಿ

Published:
Updated:

ನವದೆಹಲಿ: ಭಾರತೀಯ ಕ್ರಿಕೆಟ್‌ ತಂಡದ ‘ಬಾಹುಬಲಿ’ ಎಂದೇ ಖ್ಯಾತರಾಗಿರುವ ಮಹೇಂದ್ರ ಸಿಂಗ್ ದೋನಿ ಭಾನುವಾರ 38ರ ವಸಂತಕ್ಕೆ ಕಾಲಿಟ್ಟಿದ್ದಾರೆ. 

ದೋನಿಯಾ ಜನ್ಮ ದಿನಕ್ಕೆ ಟೀಂ ಇಂಡಿಯಾದ ಆಟಗಾರರ ಸೇರಿದಂತೆ ಗಣ್ಯರು ಶುಭ ಕೋರಿದ್ದಾರೆ. 

ಪ್ರಸ್ತುತ ದೋನಿ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಈಗಾಗಲೇ ಭಾರತ ತಂಡ ಸೆಮಿಫೈನಲ್‌  ಪ್ರವೇಶಿಸಿದ್ದು ಮಂಗಳವಾರ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. 

ಪತ್ನಿ ಸಾಕ್ಷಿಸಿಂಗ್‌ ಹಾಗೂ ಪುತ್ರಿಯ ಜೊತೆ ದೋನಿ ಕೇಕ್‌ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಅಚರಿಸಿಕೊಂಡರು. ಈ ವೇಳೆ ಟೀಂ ಇಂಡಿಯಾದ ಆಟಗಾರರು ಉಪಸ್ಥಿತರಿದ್ದರು. 

 

ಪ್ರತಿಕ್ರಿಯಿಸಿ (+)