ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯ ಅರ್ಧದಷ್ಟು ಪಂದ್ಯಾವಳಿಗಳು ಮುಕ್ತಾಯಗೊಂಡಿವೆ. ಆದರೆ, 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾತ್ರ ಕೇವಲ 3 ಪಂದ್ಯಗಳಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಈ ನಡುವೆ ಎಂ.ಎಸ್. ಧೋನಿ ಅವರು ಯಾವಾಗ ಮೈದಾನಕ್ಕೆ ಇಳಿಯುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ.

ವರದಿಯೊಂದರ ಪ್ರಕಾರ, ‘ಎಂ.ಎಸ್. ಧೋನಿ ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆದರೆ, ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಸಂಯೋಜನೆಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ತಂಡದಿಂದ ದೂರ ಇರಲು ನಿರ್ಧರಿಸಿದ್ದಾರೆ’ ಎಂದು ತಿಳಿಸಿದೆ.

ಸ್ನಾಯು ಸೆಳೆತದಿಂದ ಬಳಲುತ್ತಿದ್ದ ಧೋನಿ, ಕಳೆದ ವಾರ ನೆಟ್ ಸೆಷನ್ಗಳಿಗೆ ಹಾಜರಾಗಿದ್ದರು. ಆದರೆ, ಅವರು ಆಡುವ ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಅಭಿಮಾನಿಗಳು ಮಾತ್ರ ಅವರನ್ನು ಮೈನದಾನದಲ್ಲಿ ನೋಡಲು ಉತ್ಸುಕರಾಗಿದ್ದಾರೆ. ಧೋನಿ ಫಿಟ್ನೆಸ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಆದರೆ ಅವರು ಮೈದಾನಕ್ಕೆ ಇಳಿಯುವುದರಿಂದ ಯುವ ಆಟಗಾರರಿಗೆ ಅವಕಾಶ ಕೈತಪ್ಪುತ್ತದೆ ಹಾಗೂ ತಂಡದ ಸಂಯೋಜನೆಗೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಅವರು ಆಡುವ ತಂಡದಲ್ಲಿ ಕಾಣಿಸಿಕೊಂಡಿಲ್ಲ.

ಸಿಎಸ್ಕೆ ತಂಡದ ಮಧ್ಯಮ ಕ್ರಮಾಂಕ ಕಳಪೆ ಆಟ ಪ್ರದರ್ಶಿಸುತ್ತಿದೆ. ಆದರೂ, ಧೋನಿ ಆಡುವ ಅಥವಾ ಆಡದಿರುವ ನಿರ್ಧಾರ ತೆಗೆದುಕೊಳ್ಳುವವರು ಅವರೇ ಎಂದು ವರದಿ ತಿಳಿಸಿದೆ.

ಧೋನಿ ಆಡುವ ಕುರಿತು ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ತರಬೇತುದಾರ, ಮೈಕೆಲ್ ಹಸ್ಸಿ, ಎಂ.ಎಸ್. ಧೋನಿ ಅವರು ಗಾಯದಿಂದ ಚೇತರಿಸಿಕೊಂಡರೆ, ವಿಕೆಟ್ ಕೀಪರ್ ಆಗಿ ಮೈದಾನಕ್ಕೆ ಬರುತ್ತಾರೆಯೇ ಹೊರತು, ಅವರು ಇಂಪ್ಯಾಕ್ಟ್ ಆಟಗಾರನಾಗಿ ಆಡುವುದಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.