ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಇಂದು (ಮೇ 18) ನಡೆಯಲಿರುವ ಪ್ಲೇ ಆಫ್ ಓಟದ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬಲಿಷ್ಠ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಸಿಎಸ್ಕೆ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಆಡುತ್ತಾರಾ? ಇಲ್ಲವಾ..? ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

ಪ್ಲೇ ಆಫ್ ಪ್ರವೇಶ ಪಡೆಯಲು ಚೆನ್ನೈ ತಂಡಕ್ಕೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ವಿಶೇಷವಾಗಿ ಇಂದಿನ ಪಂದ್ಯ ತವರಿನಲ್ಲೇ ನಡೆಯುತ್ತಿರುವುದರಿಂದ ಎಸ್ಆರ್ಎಚ್ ತಂಡವನ್ನು ಮಣಿಸಿ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ಸಿಎಸ್ಕೆ ಎದುರು ನೋಡುತ್ತಿದೆ.

ಕೊನೆಯ ಪಂದ್ಯ ಆಡುತ್ತಾರಾ ಮಹಿ?

44 ವರ್ಷದ ಎಂ.ಎಸ್. ಧೋನಿ ಅವರು ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಐಪಿಎಲ್ನಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ. ಇಂದಿನ ಪಂದ್ಯವು ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವುದರಿಂದ, ಎಂ.ಎಸ್. ಧೋನಿ ಅವರು ಕಣಕ್ಕಿಳಿಯಲಿದ್ದಾರೆ ಮತ್ತು ಇದು ಅವರ ಕೊನೆಯ ಐಪಿಎಲ್ ಪಂದ್ಯವಾಗಲಿದೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.

ವಿಶೇಷವಾಗಿ ಪಂದ್ಯಕ್ಕೂ ಮುನ್ನ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರು ಚೆನ್ನೈ ಮೈದಾನಕ್ಕೆ ಆಗಮಿಸಿರುವುದರಿಂದ, ಇಂದಿನ ಪಂದ್ಯದ ಮೂಲಕ ಚೆನ್ನೈ ಫ್ರಾಂಚೈಸಿ ಧೋನಿ ಅವರಿಗೆ ಬೀಳ್ಕೊಡುಗೆ ನೀಡಲಿದೆ ಎಂಬ ವದಂತಿಗಳು ಕಳೆದ 48 ಗಂಟೆಗಳಲ್ಲಿ ಹೆಚ್ಚಾಗಿವೆ.

ಐದು ವರ್ಷಗಳ ಹೇಳಿಕೆಗೆ ಈಗ ಜೀವ

ಧೋನಿ ಅವರು 2021ರ ಐಪಿಎಲ್ ಪಂದ್ಯ ಒಂದರ ಬಳಿಕ ನೀಡಿದ್ದ ಹೇಳಿಕೆಗೆ ಈಗ ಜೀವ ಬಂದಿದೆ. ಅವರು ಆಗ ಚೆನ್ನೈನಲ್ಲಿ ತಮ್ಮ ಕೊನೆಯ ಪಂದ್ಯ ಆಡುವುದಾಗಿ ಹೇಳಿದ್ದರು. ಸದ್ಯ, ಸಿಎಸ್ಕೆ ಚೆನ್ನೈನಲ್ಲಿ ಎಸ್ಆರ್ಎಚ್ ವಿರುದ್ಧ ಸೆಣಸಾಟ ನಡೆಸಲಿದೆ.

2021ರಲ್ಲಿ ಧೋನಿ ಹೇಳಿದ್ದೇನು?

‘ನಾನು ಯಾವಾಗಲೂ ನನ್ನ ಕ್ರಿಕೆಟ್ ಬಗ್ಗೆ ಯೋಜನೆ ರೂಪಿಸಿಕೊಂಡಿರುತ್ತೇನೆ. ನಾನು ಭಾರತಕ್ಕಾಗಿ ಕೊನೆಯ ಏಕದಿನ ಪಂದ್ಯ ಆಡಿದ್ದು ರಾಂಚಿಯಲ್ಲಿ. ನನ್ನ ಕೊನೆಯ ಐಪಿಎಲ್ ಪಂದ್ಯ ಚೆನ್ನೈನಲ್ಲಿ ನಡೆಯಬೇಕು ಎಂದು ಆಶಿಸುತ್ತೇನೆ. ಮುಂದಿನ ವರ್ಷವೋ ಅಥವಾ ಐದು ವರ್ಷಗಳ ನಂತರವೋ, ಅದು ನಿಮಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ’ ಎಂದು ಹೇಳಿದ್ದರು. ಧೋನಿ ಅವರು ಈ ಹೇಳಿಕೆ ನೀಡಿ 5 ವರ್ಷವಾಗಿರುವುದರಿಂದ ಇಂದೇ ಅವರು ತಮ್ಮ ಕೊನೆಯ ಐಪಿಎಲ್ ಪಂದ್ಯ ಆಡುತ್ತಾರೆ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಧೋನಿ ಅವರ ಮಾಜಿ ಸಹ ಆಟಾಗಾರ ಆರ್. ಅಶ್ವಿನ್ ಅವರು ಮಾತನಾಡಿ ‘ಎಸ್ಆರ್ಎಚ್ ವಿರುದ್ಧದ ಪಂದ್ಯಕ್ಕೂ ಮುನ್ನ ಧೋನಿ ಫಿಟ್ ಆಗಿದ್ದಾರೆ. ಹಾಗಾಗಿ ಅವರು ಮುಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.