‘ಧೋನಿ ತಂಡದಲ್ಲಿದ್ದಾಗ ಭಯ ಪಡುವ ಅಗತ್ಯವಿಲ್ಲ’

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

‘ಧೋನಿ ತಂಡದಲ್ಲಿದ್ದಾಗ ಭಯ ಪಡುವ ಅಗತ್ಯವಿಲ್ಲ’

Published:
Updated:
Prajavani

ಚೆನ್ನೈ: ‘ಮಹೇಂದ್ರ ಸಿಂಗ್‌ ಧೋನಿಯ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅವರು ತಂಡದಲ್ಲಿದ್ದರೆ ನಮಗೆ ಆನೆ ಬಲ ಬಂದಂತಾಗುತ್ತದೆ. ಏಕಾಂಗಿಯಾಗಿ ಪಂದ್ಯ ಗೆದ್ದುಕೊಡಬಲ್ಲ ಸಾಮರ್ಥ್ಯ ಅವರಲ್ಲಿದೆ’ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರ ಸುರೇಶ್‌ ರೈನಾ, ಧೋನಿ ಅವರ ಗುಣಗಾನ ಮಾಡಿದ್ದಾರೆ.

‘ಧೋನಿ ತಂಡದಲ್ಲಿದ್ದರೆ ನಮಗೆ ಯಾರ ಭಯವೂ ಇರುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ಇಡೀ ತಂಡವೇ ಸೊರಗಿಬಿಡುತ್ತದೆ. ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯಗಳಲ್ಲಿ ಸೋತಿದ್ದು ಇದಕ್ಕೆ ಸಾಕ್ಷಿ’ ಎಂದಿದ್ದಾರೆ.

‘ಮಹಿ ಕ್ರೀಸ್‌ಗೆ ಬಂದರೆ ಎದುರಾಳಿ ತಂಡದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಹಿಂದಿನ ಪಂದ್ಯಗಳಲ್ಲಿ ಅದು ಸಾಬೀತಾಗಿದೆ. ತಂಡ ಸಂಕಷ್ಟದಲ್ಲಿದ್ದಾಗ ಅವರು ಎಲ್ಲಾ ಆಟಗಾರರಲ್ಲೂ ಚೈತನ್ಯ ತುಂಬುತ್ತಾರೆ’ ಎಂದು ತಿಳಿಸಿದ್ದಾರೆ.

‘ಡೆಲ್ಲಿ ಎದುರಿನ ಪಂದ್ಯದಲ್ಲಿ ಧೋನಿ, ಶ್ರೇಯಸ್‌ ಅಯ್ಯರ್‌ ಮತ್ತು ಕ್ರಿಸ್‌ ಮೊರಿಸ್‌ ಅವರನ್ನು ಸ್ಟಂಪಿಂಗ್‌ ಮೂಲಕ ಔಟ್‌ ಮಾಡಿದ್ದ ಮಾಡಿದ ರೀತಿ ಮೆಚ್ಚುವಂತಹದ್ದು. ಅವರ ಆ ಚುರುಕುತನ ಕಂಡು ನಿಜಕ್ಕೂ ಅಚ್ಚರಿಯಾಗುತ್ತದೆ. ಆ ಎರಡು ಸ್ಟಂಪಿಂಗ್‌ನಿಂದಾಗಿ ನಮ್ಮ ಗೆಲುವು ಸುಲಭವಾಯಿತು’ ಎಂದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !