ಲಂಕಾ ತಂಡಕ್ಕೆ ಮರಳಿದ ಚಾಂಡಿಮಲ್‌

7

ಲಂಕಾ ತಂಡಕ್ಕೆ ಮರಳಿದ ಚಾಂಡಿಮಲ್‌

Published:
Updated:

ಕೊಲಂಬೊ: ಅಶಿಸ್ತಿನ ವರ್ತನೆಯಿಂದಾಗಿ ನಿಷೇಧಕ್ಕೆ ಒಳಗಾಗಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ದಿನೇಶ್ ಚಾಂಡಿಮಲ್‌ ತಂಡಕ್ಕೆ ವಾಪಸಾಗಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಪಂದ್ಯಕ್ಕೆ ಆಯ್ಕೆ ಮಾಡಿರುವ ತಂಡದಲ್ಲಿ ಅವರು ಸ್ಥಾನ ಗಳಿಸಿದ್ದಾರೆ.

ಜೂನ್‌ನಲ್ಲಿ ವೆಸ್ಟ್ ಇಂಡೀಸ್‌ ಎದುರು ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಚಾಂಡಿಮಲ್ ಚೆಂಡು ವಿರೂಪಗೊಳಿಸಿದ್ದಾರೆ ಎಂದು ಅಂಪೈರ್‌ಗಳು ದೂರಿದ್ದರು. ಇದರಿಂದ ಕೋಪಗೊಂಡ ಅವರು ಮರುದಿನ ಎರಡು ತಾಸು ತಂಡವನ್ನು ಅಂಗಣಕ್ಕೆ ಇಳಿಸಿರಲಿಲ್ಲ. ಹೀಗಾಗಿ ಅವರು ಮತ್ತು ಕೋಚ್‌ ಚಂಡಿಕಾ ಹತುರುಸಿಂಘ ಮತ್ತು ವ್ಯವಸ್ಥಾಪಕ ಅಸಂಕಾ ಗುರುಸಿನ್ಹಾ ಅವರ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನಿಷೇಧ ಹೇರಿತ್ತು. 

ಟ್ವೆಂಟಿ–20 ಪಂದ್ಯಕ್ಕೆ ಶ್ರೀಲಂಕಾ ತಂಡ: ಏಂಜೆಲೊ ಮ್ಯಾಥ್ಯೂಸ್‌ (ನಾಯಕ), ದಸೂನ್ ಶನಕ, ಕುಶಾಲ್ ಪೆರೇರ, ಧನಂಜಯ ಡಿ ಸಿಲ್ವ, ಉಪುಲ್ ತರಂಗ, ಕುಶಾಲ್ ಮೆಂಡಿಸ್‌, ತಿಸಾರ ಪೆರೇರ, ಶೆಹಾನ್ ಜಯಸೂರ್ಯ, ಶೆಹಾನ್ ಮಧುಶಂಕ, ಲಾಹಿರು ಕುಮಾರ, ದಿನೇಶ್ ಚಾಂಡಿಮಲ್‌, ಅಖಿಲ ಧನಂಜಯ, ಜೆಫ್ರಿ ವಂಡರ್ಸೆ, ಲಕ್ಷಣ್‌ ಸಂಡಗನ್‌, ಬಿನುರ ಫರ್ನಾಂಡೊ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !