ಇಂದಿನಿಂದ ದುಲೀಪ್‌ ಟ್ರೋಫಿ

7
ಪ್ರಶಸ್ತಿಗಾಗಿ ಮೂರು ತಂಡಗಳ ಪೈಪೋಟಿ; ಗುಲಾಬಿ ವರ್ಣದ ಚೆಂಡು ಬಳಕೆ

ಇಂದಿನಿಂದ ದುಲೀಪ್‌ ಟ್ರೋಫಿ

Published:
Updated:
Deccan Herald

ದಿಂಡಿಗಲ್‌, ತಮಿಳುನಾಡು: ಯುವ ಆಟಗಾರರ ಪ್ರತಿಭಾನ್ವೇಷಣೆಗೆ ವೇದಿಕೆಯಾಗಿರುವ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಶುಕ್ರವಾರದಿಂದ ಆರಂಭವಾಗಲಿದೆ.

ನಾಥಮ್‌ನ ಎನ್‌ಪಿಆರ್‌ ಕಾಲೇಜಿನ ಮೈದಾನದಲ್ಲಿ ಹೊನಲು ಬೆಳಕಿನಡಿ ನಡೆಯುವ ಟೂರ್ನಿಯಲ್ಲಿ ಇಂಡಿಯಾ ರೆಡ್‌, ಇಂಡಿಯಾ ಬ್ಲೂ ಮತ್ತು ಇಂಡಿಯಾ ಗ್ರೀನ್‌ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಈ ಟೂರ್ನಿಯಲ್ಲಿ ಗುಲಾಬಿ ವರ್ಣದ ಚೆಂಡನ್ನು ಬಳಸಲಾಗುತ್ತಿದೆ.

ರೌಂಡ್‌ ರಾಬಿನ್‌ ಹಂತದ ಮೊದಲ ಹೋರಾಟದಲ್ಲಿ ಹಾಲಿ ಚಾಂಪಿಯನ್‌ ಇಂಡಿಯಾ ರೆಡ್‌ ಮತ್ತು ಇಂಡಿಯಾ ಗ್ರೀನ್‌ ತಂಡಗಳು ಸೆಣಸಲಿವೆ. ಆಗಸ್ಟ್‌ 23ರಿಂದ 26ರವರೆಗೆ ನಿಗದಿಯಾಗಿರುವ ಎರಡನೆ ಪಂದ್ಯದಲ್ಲಿ ಇಂಡಿಯಾ ರೆಡ್‌ ಮತ್ತು ಇಂಡಿಯಾ ಬ್ಲೂ ಆಡಲಿವೆ. ಇಂಡಿಯಾ ಗ್ರೀನ್‌ ಮತ್ತು ಇಂಡಿಯಾ ಬ್ಲೂ ನಡುವಣ ಮೂರನೆ ಪಂದ್ಯ ಆಗಸ್ಟ್‌ 29ರಿಂದ ಸೆಪ್ಟೆಂಬರ್‌ 1ರವರೆಗೆ ಜರುಗಲಿದೆ. ಫೈನಲ್‌ ಹೋರಾಟ (ಸೆಪ್ಟೆಂಬರ್‌ 4ರಿಂದ 8) ಐದು ದಿನ ನಡೆಯಲಿದೆ.

ಮಿಥುನ್‌ಗೆ ಸ್ಥಾನ: ಕರ್ನಾಟಕದ ವೇಗದ ಬೌಲರ್‌ ಅಭಿಮನ್ಯು ಮಿಥುನ್‌ ಅವರು ಟೂರ್ನಿಯಲ್ಲಿ ಇಂಡಿಯಾ ರೆಡ್‌ ತಂಡದ ಪರ ಆಡಲಿದ್ದಾರೆ.

ತಂಡಗಳು ಇಂತಿವೆ: ಇಂಡಿಯಾ ಬ್ಲೂ: ಫೈಜ್‌ ಫಜಲ್‌ (ನಾಯಕ), ಅಭಿಷೇಕ್‌ ರಾಮನ್‌, ಅನ್‌ಮೋಲ್‌ಪ್ರೀತ್‌ ಸಿಂಗ್‌, ಗಣೇಶ್‌ ಸತೀಶ್‌, ನಿಖಿಲ್‌ ಗಂಗ್ಟಾ, ಧ್ರುವ ಶೋರೆ, ಕೆ.ಎಸ್‌.ಭರತ್‌ (ವಿಕೆಟ್‌ ಕೀಪರ್‌), ಅಕ್ಷಯ್‌ ವಾಖರೆ, ಸೌರವ್‌ ಕುಮಾರ್‌, ಸ್ವಪ್ನಿಲ್‌ ಸಿಂಗ್‌, ಬಸಿಲ್‌ ಥಂಪಿ, ಬಂಡಾರು ಅಯ್ಯಪ್ಪ, ಜಯದೇವ್‌ ಉನದ್ಕತ್‌ ಮತ್ತು ಧವಳ್‌ ಕುಲಕರ್ಣಿ.

ಇಂಡಿಯಾ ರೆಡ್‌: ಅಭಿನವ್‌ ಮುಕುಂದ್‌ (ನಾಯಕ), ಸಂಜಯ್‌ ರಾಮಸ್ವಾಮಿ, ಆಶುತೋಷ್‌ ಸಿಂಗ್‌, ಬಾಬಾ ಅಪರಾಜಿತ್‌, ವೃತ್ತಿಕ್‌ ಚಟರ್ಜಿ, ಭವನಕ ಸಂದೀಪ್‌, ಅಕ್ಷಯ್‌ ವಾಡಕರ್‌ (ವಿಕೆಟ್‌ ಕೀಪರ್‌), ಶಹಬಾಜ್‌ ನದೀಮ್‌, ಮಿಹಿರ್‌ ಹಿರ್ವಾನಿ, ಪರ್ವೇಜ್‌ ರಸೂಲ್‌, ರಜನೀಶ್‌ ಗುರುಬಾನಿ, ಅಭಿಮನ್ಯು ಮಿಥುನ್‌, ಇಶಾನ್‌ ಪೊರೇಲ್‌ ಮತ್ತು ಯರ‍್ರಾ ಪೃಥ್ವಿರಾಜ್‌.

ಇಂಡಿಯಾ ಗ್ರೀನ್‌: ಪಾರ್ಥೀವ್‌ ಪಟೇಲ್‌ (ನಾಯಕ ಮತ್ತು ವಿಕೆಟ್‌ ಕೀಪರ್‌), ಪ್ರಶಾಂತ್‌ ಚೋಪ್ರಾ, ಪ್ರಿಯಾಂಕ್‌ ಪಾಂಚಾಲ್‌, ಸುದೀಪ್‌ ಚಟರ್ಜಿ, ಗುರುಕೀರತ್‌ ಸಿಂಗ್‌ ಮಾನ್‌, ಬಾಬಾ ಇಂದ್ರಜಿತ್‌, ವಿ.ಪಿ.ಸೋಳಂಕಿ, ಜಲಜ್‌ ಸಕ್ಸೇನಾ, ಕರಣ್‌ ಶರ್ಮಾ, ವಿಕಾಸ್‌ ಮಿಶ್ರಾ, ಕೆ.ವಿಘ್ನೇಶ್‌, ಅಂಕಿತ್‌ ರಜಪೂತ್‌, ಅಶೋಕ್‌ ದಿಂಡಾ ಮತ್ತು ಅತಿತ್‌ ಸೇಠ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !