ದುಲೀಪ್ ಟ್ರೋಫಿ: ನಿಖಿಲ್ ಗಂಗ್ಟಾ ಶತಕ

7

ದುಲೀಪ್ ಟ್ರೋಫಿ: ನಿಖಿಲ್ ಗಂಗ್ಟಾ ಶತಕ

Published:
Updated:

‌ದಿಂಡಿಗಲ್‌: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ನಿಖಿಲ್ ಗಂಗ್ಟಾ (130; 241 ಎಸೆತ, 6 ಸಿಕ್ಸರ್‌, 7 ಬೌಂಡರಿ), ಅನ್ಮೋಲ್‌ಪ್ರೀತ್ ಸಿಂಗ್‌ (96; 147 ಎಸೆತ, 1 ಸಿಕ್ಸರ್‌, 14 ಬೌಂಡರಿ) ಮತ್ತು ಸ್ವಪ್ನಿಲ್ ಸಿಂಗ್‌ (69; 117 ಎಸೆತ, 2 ಸಿಕ್ಸರ್‌, 9 ಬೌಂಡರಿ) ಅವರ ಉತ್ತಮ ಆಟದ ಬಲದಿಂದ ಇಂಡಿಯಾ ಬ್ಲೂ ತಂಡ ಭಾರಿ ಮೊತ್ತ ದಾಖಲಿಸಿದೆ.

ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದ ಎರಡನೇ ದಿನವಾದ ಬುಧವಾರ ಇಂಡಿಯಾ ರೆಡ್‌ ಎದುರು ಇಂಡಿಯಾ ಬ್ಲೂ ತಂಡ 541 ರನ್‌ ಗಳಿಸಿದೆ.

ಮೊದಲ ದಿನ ತಂಡವು ಐದು ವಿಕೆಟ್‌ಗಳಿಗೆ 260 ರನ್ ಗಳಿಸಿತ್ತು. ರಿಕಿ ಭುಯಿ 53 ಮತ್ತು ನಿಖಿಲ್‌ ಒಂದು ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. ಬುಧವಾರ ರಿಕಿ ಬೇಗನೇ ಔಟಾದರೂ ನಿಖಿಲ್‌ ಭರ್ಜರಿ ಬ್ಯಾಟಿಂಗ್ ಮಾಡಿದರು. ನಂತರ ಅನ್ಮೋಲ್‌ಪ್ರೀತ್ ಸಿಂಗ್‌ ಮತ್ತು ನಿಖಿಲ್ ಉತ್ತಮ ಜೊತೆಯಾಟ ಆಡಿದರು. ಇವರಿಬ್ಬರು ಔಟಾದ ನಂತರ ಸ್ವಪ್ನಿಲ್, ಸೌರಭ್ ಕುಮಾರ್ ಮತ್ತು ಜಯದೇವ ಉನದ್ಕತ್‌ ಕೂಡ ಉತ್ತಮ ಬ್ಯಾಟಿಂಗ್ ಮಾಡಿ ತಂಡಕ್ಕೆ ನೆರವಾದರು.

ಸಂಕ್ಷಿಪ್ತ ಸ್ಕೋರು: ಇಂಡಿಯಾ ಬ್ಲೂ, ಮೊದಲ ಇನಿಂಗ್ಸ್‌: 167.3 ಓವರ್‌ಗಳಲ್ಲಿ 541 (ರಿಕಿ ಭುಯಿ 60, ಅನ್ಮೋಲ್‌ಪ್ರೀತ್ ಸಿಂಗ್‌ 96, ನಿಖಿಲ್ ಗಂಗ್ಟಾ 130, ಸ್ವಪ್ನಿಲ್ ಸಿಂಗ್‌ 69, ಸೌರಭ್ ಕುಮಾರ್‌ 36, ಜಯದೇವ ಉನದ್ಕತ್‌ 24; ಪ್ರಸಿದ್ಧ ಕೃಷ್ಣ 72ಕ್ಕೆ2, ಪರ್ವೇಜ್‌ ರಸೂಲ್‌ 150ಕ್ಕೆ4, ಮಿಹಿರ್ ಹಿರ್ವಾನಿ 190ಕ್ಕೆ3). ಇಂಡಿಯಾ ರೆಡ್ ಎದುರಿನ ಪಂದ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !