ಇಂಡಿಯಾ ಗ್ರೀನ್‌ ಉತ್ತಮ ಆರಂಭ

7

ಇಂಡಿಯಾ ಗ್ರೀನ್‌ ಉತ್ತಮ ಆರಂಭ

Published:
Updated:

ದಿಂಡಿಗಲ್‌, ತಮಿಳುನಾಡು: ಸುದೀಪ್‌ ಚಟರ್ಜಿ (ಔಟಾಗದೆ 57, 143 ಎಸೆತ, 1 ಸಿಕ್ಷರ್, 3 ಬೌಂಡರಿ.) ಹಾಗೂ ಬಿ. ಇಂದ್ರಜಿತ್‌ (ಔಟಾಗದೆ 32, 82 ಎ, 3 ಬೌಂ.) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಇಂಡಿಯಾ ಗ್ರೀನ್‌ ತಂಡ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಇಟ್ಟಿದೆ.

ಶುಕ್ರವಾರದ ಅಂತ್ಯಕ್ಕೆ ಇಂಡಿಯಾ ರೆಡ್‌ ತಂಡವು 90 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 230 ರನ್‌ ಗಳಿಸಿತ್ತು. ಎರಡನೇ ದಿನವಾದ ಶನಿವಾರ ಆಟ ಮುಂದುವರಿಸಿದ ಈ ತಂಡವು 337 ರನ್‌ಗಳಿಗೆ ಆಲೌಟಾಯಿತು. ಅಶುತೋಶ್‌ ಸಿಂಗ್‌ (80) ಹಾಗೂ ಮಿಹಿರ್‌ ಹಿರ್ವಾನಿ (61) ಅವರು ಅರ್ಧಶತಕ ಗಳಿಸಿದರು. ಇಂಡಿಯಾ ರೆಡ್‌ ತಂಡದ ಪರವಾಗಿ ಅಂಕಿತ್‌ ರಜಪೂತ್‌ ಅವರು 57 ರನ್‌ಗಳನ್ನು ನೀಡಿ ನಾಲ್ಕು ವಿಕೆಟ್‌ ಕಬಳಿಸಿದರು. ಕೆ. ವಿಘ್ನೇಶ್‌, 80 ರನ್‌ಗಳನ್ನು ನೀಡಿ 3 ವಿಕೆಟ್‌ ಗಳಿಸಿದರು. 

ಇಂಡಿಯಾ ಗ್ರೀನ್ ತಂಡವು ಆರಂಭದಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಈ ಹಂತದಲ್ಲಿ ಜೊತೆಗೂಡಿದ ಸುದೀಪ್‌ ಹಾಗೂ ಇಂದ್ರಜಿತ್‌ ಅವರು ಉತ್ತಮ ಇನಿಂಗ್ಸ್‌ ಕಟ್ಟಿದರು. ದಿನದ ಅಂತ್ಯಕ್ಕೆ ತಂಡವು 44 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 116 ರನ್‌ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್‌: ಇಂಡಿಯಾ ರೆಡ್‌, ಮೊದಲ ಇನಿಂಗ್ಸ್‌; 132.5 ಓವರ್‌ಗಳಲ್ಲಿ 337 (ಅಶುತೋಶ್‌ ಸಿಂಗ್‌ 80, ಮಿಹಿರ್‌ ಹಿರ್ವಾನಿ 61, ಪೃಥ್ವಿರಾಜ್‌ 6, ಅಂಕಿತ್‌ ರಜಪೂತ್‌ 57ಕ್ಕೆ 4, ಕೆ. ವಿಘ್ನೇಶ್ 80ಕ್ಕೆ 3); ಇಂಡಿಯಾ ಗ್ರೀನ್‌, ಮೊದಲ ಇನಿಂಗ್ಸ್‌: 44 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 116 (ಪ್ರಿಯಾಂಕ್‌ ಪಾಂಚಾಲ್‌ 8, ಪ್ರಶಾಂತ್‌ ಚೋಪ್ರಾ 19, ಸುದೀಪ್‌ ಚಟರ್ಜಿ ಔಟಾಗದೆ 57, ಬಿ. ಇಂದ್ರಜಿತ್‌ ಔಟಾಗದೆ 32, ರಜನೀಶ್‌ ಗುರ್ಬಾನಿ 43ಕ್ಕೆ 2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !