ಅನಂತಪುರ: ಭಾರತ ತಂಡದಲ್ಲಿ ಸ್ಥಾನ ಪಡೆಯುವ ಉತ್ಸಾಹದಲ್ಲಿರುವ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ , ರಿಯಾನ್ ಪರಾಗ್ ಮತ್ತು ರಿಂಕು ಸಿಂಗ್ ಅವರು ಗುರುವಾರ ಆರಂಭವಾಗುವ ದುಲೀಪ್ ಟ್ರೋಫಿ ಟೂರ್ನಿಯ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ರಾಷ್ಟ್ರೀಯ ತಂಡದ ಆಯ್ಕೆಗಾರರ ಗಮನ ಸೆಳೆಯಲು ಈ ಸುತ್ತು ಸದವಕಾಶವಾಗಿದೆ.

ಸೆ . 22ರವರೆಗೆ ನಡೆಯಲಿರುವ ಪಂದ್ಯಗಳಲ್ಲಿ ಭಾರತ ಬಿ ತಂಡವು ಡಿ ವಿರುದ್ಧ ಹಾಗೂ ಎ ತಂಡವು ಸಿ ವಿರುದ್ಧ ಸೆಣಸಲಿವೆ.

ಕಳೆದೆರಡು ಪಂದ್ಯಗಳ ನಂತರ ಪಾಯಿಂಟ್ ಪಟ್ಟಿಯಲ್ಲಿ ಭಾರತ ಸಿ ತಂಡವು ಅಗ್ರಸ್ಥಾನದಲ್ಲಿದೆ. ಬಿ (7 ಅಂಕ) ಮತ್ತು ಎ (6 ಅಂಕ) ತಂಡಗಳು ಕ್ರಮವಾಗಿ ಎರಡು, ಮೂರನೇ ಸ್ಥಾನದಲ್ಲಿವೆ. ಡಿ ತಂಡವು ಕೊನೆಯ ಸ್ಥಾನದಲ್ಲಿದ್ದು ಯಾವುದೇ ಅಂಕ ಪಡೆದಿಲ್ಲ.

ಸಿ ತಂಡಕ್ಕೆ ಋತುರಾಜ್ ಗಾಯಕವಾಡ, ಎ ತಂಡಕ್ಕೆ ಮಯಂಕ್ ಅಗರವಾಲ್, ಬಿ ತಂಡಕ್ಕೆ ಅಭಿಮನ್ಯು ಈಶ್ವರನ್ ಮತ್ತು ಡಿ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕರಾಗಿದ್ದಾರೆ. ಬ್ಯಾಟಿಂಗ್ ಮತ್ತು ನಾಯಕತ್ವ ಎರಡರಲ್ಲೂ ಅಯ್ಯರ್ ವೈಫಲ್ಯ ಅನುಭವಿಸಿದ್ದು ಅಪಾರ ಒತ್ತಡದಲ್ಲಿದ್ದಾರೆ. ಅದರಿಂದಾಗಿಯೇ ಅವರನ್ನು ಬಾಂಗ್ಲಾ ಎದುರಿನ ಟೆಸ್ಟ್ ಸರಣಿಗೆ ಪರಿಗಣಿಸಲಿಲ್ಲ. ಅವರೊಂದಿಗೆ ಸಂಜು ಕೂಡ ಇದ್ದಾರೆ.

ರಿಯಾನ್ ಎ ತಂಡದಲ್ಲಿದ್ದಾರೆ. ರಿಂಕು ಬಿ ತಂಡದಲ್ಲಿ ಆಡುತ್ತಿದ್ದಾರೆ.

ಪಂದ್ಯ ಆರಂಭ: ಬೆಳಿಗ್ಗೆ 9.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.