ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಲೀಪ್‌ ಟ್ರೋಫಿ ಕ್ರಿಕೆಟ್: ದಕ್ಷಿಣ, ಪಶ್ಚಿಮ ವಲಯ ಬಿಗಿಹಿಡಿತ

ಸಾಯಿ ಕಿಶೋರ್‌ ಕೈಚಳಕ
Last Updated 17 ಸೆಪ್ಟೆಂಬರ್ 2022, 14:24 IST
ಅಕ್ಷರ ಗಾತ್ರ

ಸೇಲಂ, ತಮಿಳುನಾಡು: ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳು ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯಗಳಲ್ಲಿ ತಮ್ಮ ಎದುರಾಳಿಗಳ ಮೇಲೆ ಬಿಗಿ ಹಿಡಿತ ಸಾಧಿಸಿದ್ದು, ಫೈನಲ್‌ನತ್ತ ದಿಟ್ಟ ಹೆಜ್ಜೆಯಿಟ್ಟಿವೆ.

ಸೇಲಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎಡಗೈ ಸ್ಪಿನ್ನರ್‌ ಆರ್‌.ಸಾಯಿ ಕಿಶೋರ್‌ (70ಕ್ಕೆ 7) ಅವರ ಕೈಚಳಕದ ನೆರವಿನಿಂದ ದಕ್ಷಿಣ ವಲಯ ತಂಡ, ಉತ್ತರ ವಲಯ ವಿರುದ್ಧ ಭಾರಿ ಮುನ್ನಡೆ ಗಳಿಸಿದೆ.

ವಿಕೆಟ್‌ ನಷ್ಟವಿಲ್ಲದೆ 19 ರನ್‌ಗಳಿಂದ ಶನಿವಾರ ಆಟ ಮುಂದುವರಿಸಿದ ಉತ್ತರ ವಲಯ ಮೊದಲ ಇನಿಂಗ್ಸ್‌ನಲ್ಲಿ 207 ರನ್‌ಗಳಿಗೆ ಆಲೌಟಾಯಿತು. ಎದುರಾಳಿಗೆ ಫಾಲೋಆನ್‌ ನೀಡದೆ ಎರಡನೇ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ವಲಯ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 157 ರನ್‌ ಗಳಿಸಿದೆ. ಹನುಮ ವಿಹಾರಿ ನೇತೃತ್ವದ ತಂಡ ಒಟ್ಟಾರೆ 580 ರನ್‌ಗಳ ಮುನ್ನಡೆ ಸಾಧಿಸಿದೆ.

ಕೊಯಮತ್ತೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಶ್ಚಿಮ ವಲಯ ತಂಡ, ಕೇಂದ್ರ ವಲಯದ ಗೆಲುವಿಗೆ 501 ರನ್‌ಗಳ ಗುರಿ ನೀಡಿದೆ. ಕಠಿಣ ಸವಾಲು ಬೆನ್ನಟ್ಟಿರುವ ಕೇಂದ್ರ ವಲಯ, ಮೂರನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ 2 ವಿಕೆಟ್‌ಗೆ 33 ರನ್‌ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ದಕ್ಷಿಣ ವಲಯ 8 ವಿಕೆಟ್‌ಗೆ 630 ಡಿಕ್ಲೇರ್ಡ್. ಉತ್ತರ ವಲಯ 67 ಓವರ್‌ಗಳಲ್ಲಿ 207 (ಯಶ್‌ ಧುಲ್‌ 39, ನಿಶಾಂತ್‌ ಸಿಂಧು 40,ಆರ್‌.ಸಾಯಿ ಕಿಶೋರ್‌ 70ಕ್ಕೆ 7, ಕೆ.ಗೌತಮ್‌ 68ಕ್ಕೆ 2) ಎರಡನೇ ಇನಿಂಗ್ಸ್‌: ದಕ್ಷಿಣ ವಲಯ 28 ಓವರ್‌ಗಳಲ್ಲಿ 1 ವಿಕೆಟ್‌ಗೆ 157 (ರೋಹನ್‌ ಕುನ್ನುಮಲ್‌ 77, ಮಯಂಕ್‌ ಅಗರವಾಲ್ ಬ್ಯಾಟಿಂಗ್ 53, ರವಿ ತೇಜ ಬ್ಯಾಟಿಂಗ್ 19)

ಕೊಯಮತ್ತೂರಿನ ಪಂದ್ಯ: ಮೊದಲ ಇನಿಂಗ್ಸ್‌: ಪಶ್ಚಿಮ ವಲಯ: 257. ಕೇಂದ್ರ ವಲಯ: 128. ಎರಡನೇ ಇನಿಂಗ್ಸ್‌: ಪಶ್ಚಿಮ ವಲಯ 104.4 ಓವರ್‌ಗಳಲ್ಲಿ 371 (ಪೃಥ್ವಿ ಶಾ 142, ಅರ್ಮಾನ್‌ ಜಾಫರ್‌ 49, ಹೇತ್‌ ಪಟೇಲ್ 67, ಕುಮಾರ ಕಾರ್ತಿಕೇಯ 105ಕ್ಕೆ 3, ಅಂಕಿತ್‌ ರಜಪೂತ್‌ 63ಕ್ಕೆ 2). ಕೇಂದ್ರ ವಲಯ 9.2 ಓವರ್‌ಗಳಲ್ಲಿ 2 ವಿಕೆಟ್‌ಗೆ 33

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT