ಮೌಂಟ್ ಮಾಂಗಾನೂಯಿ: ಹೊಸಮುಖಗಳನ್ನು ಹೊಂದಿದ ದಕ್ಷಿಣ ಆಫ್ರಿಕಾ ತಂಡ ಭಾನುವಾರ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಏಳು ವಿಕೆಟ್ಗಳಿಂದ ಸೋಲಿಸಿತು.

ವಿಶ್ವಕಪ್ ರನ್ನರ್ ಅಪ್ ತಂಡವು, ಹರಿಣಗಳ ಪಡೆಯ ವೇಗದ ದಾಳಿಗೆ ಸಿಲುಕಿ 36 ರನ್ಗಳಾಗುವಷ್ಟರಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಅಂತಿಮವಾಗಿ 15ನೇ ಓವರಿನಲ್ಲಿ 91 ರನ್ಗಳಿಗೆ ಆಲೌಟ್ ಆಯಿತು.

ಆರಂಭ ಆಟಗಾರ ಕಾನರ್ ಎಸ್ಟರ್ಹುಯಿಝೆನ್ ಅವರ ಅಜೇಯ 45 ರನ್ಗಳ ನೆರವಿನಿಂದ ದಕ್ಷಿಣ ಆಫ್ರಿಕಾ ಇನ್ನೂ 20 ಎಸೆತಗಳಿರುವಂತೆ 3 ವಿಕೆಟ್ಗೆ 93 ರನ್ ಹೊಡೆಯಿತು. 24 ವರ್ಷ ವಯಸ್ಸಿನ ಕಾನರ್ ಅವರು ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ನಾಲ್ವರು ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ರಾಬಿನ್ ಹರ್ಮನ್, ಡಿಯಾನ್ ಫಾರೆಸ್ಟರ್ ಮತ್ತು ಎನ್ಕೊಬನಿ ಮೊಕೇನಾ ಇತರ ಮೂವರು. 19 ವರ್ಷ ವಯಸ್ಸಿನ ವೇಗಿ ಮೊಕೇನಾ 3.3. ಓವರುಗಳಲ್ಲಿ 26 ರನ್ನಿಗೆ 3 ವಿಕೆಟ್ ಪಡೆದರು.

ಮಿಚೆಲ್ ಸ್ಯಾಂಟ್ನರ್ ಮತ್ತು ಆಲ್ರೌಂಡರ್ ಜಿಮ್ಮಿ ನೀಶಮ್ ಬಿಟ್ಟರೆ, ಇತ್ತೀಚಿನ ವಿಶ್ವಕಪ್ನಲ್ಲಿ ಆಡಿದ್ದ ನ್ಯೂಜಿಲೆಂಡ್ನ ಹೆಚ್ಚಿನ ಅನುಭವಿ ಆಟಗಾರರು ವಿಶ್ರಾಂತಿ ಪಡೆದರು. ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದಿತ್ತು.

ಈ ಸರಣಿಗೆ ಕೇಶವ ಮಹಾರಾಜ್ ಅವರು ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿದ್ದಾರೆ. ಅವರಿಗೆ ಈ ಪಂದ್ಯ 50ನೇ ಟಿ20 ಅಂತರರಾಷ್ಟ್ರೀಯ ಪಂದ್ಯವಾಗಿತ್ತು.

ಸರಣಿಯ ಎರಡನೇ ಪಂದ್ಯ ಮಂಗಳವಾರ ಹ್ಯಾಮಿಲ್ಟನ್ನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು

ನ್ಯೂಜಿಲೆಂಡ್: 14.3 ಓವರುಗಳಲ್ಲಿ 91 (ಜೇಮ್ಸ್ ನೀಶಮ್ 26; ಜೆರಾಲ್ಡ್ ಕೋಟ್ಜಿಯ 14ಕ್ಕೆ2, ಎನ್ಕೊಬನಿ ಮೊಕೇನಾ 26ಕ್ಕೆ3, ಒಟ್ನೀಲ್ ಬಾರ್ಟ್ಮನ್ 22ಕ್ಕೆ2, ಕೇಶವ ಮಹಾರಾಜ್ 25ಕ್ಕೆ2)

ದಕ್ಷಿಣ ಆಫ್ರಿಕಾ: 16.4 ಓವರುಗಳಲ್ಲಿ 3 ವಿಕೆಟ್ಗೆ 93 (ಕಾನರ್ ಎಸ್ಟರ್ಹುಯಿಝೆನ್ ಔಟಾಗದೇ 45).

ಪಂದ್ಯದ ಆಟಗಾರ: ಎನ್ಕೊಬನಿ ಮೊಕೇನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.