ಗುರುವಾರ , ಅಕ್ಟೋಬರ್ 17, 2019
24 °C

ಬಿಸಿಸಿಐ ಎಜಿಎಂ: ಎಂಟು ರಾಜ್ಯಗಳಿಗೆ ನಿರ್ಬಂಧ

Published:
Updated:

ನವದೆಹಲಿ: ಇದೇ 23ರಂದು ಮುಂಬೈನಲ್ಲಿ ನಡೆಯಲಿರುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಸರ್ವಸದಸ್ಯರ ಸಭೆಯಲ್ಲಿ ಭಾಗ ವಹಿಸದಂತೆ ಎಂಟು ಘಟಕಗಳಿಗೆ ನಿರ್ಬಂಧ ಹೇರಲಾಗಿದೆ.

ಪರಿಷ್ಕೃತ ನಿಯಮಾವಳಿಯ ಪ್ರಕಾರ ನಡೆದುಕೊಳ್ಳದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಬಿಸಿಸಿಐನಲ್ಲಿ ವಿವಿಧ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಗಳು ಸೇರಿದಂತೆ ಒಟ್ಟು 38 ಘಟಕಗಳಿವೆ. ಬಿಸಿಸಿಐ ಚುನಾವಣಾ ಅಧಿಕಾರಿ ಎನ್‌.ಗೋಪಾಲಸ್ವಾಮಿ, ‘ಮತದಾರರ ಅಂತಿಮ ಪಟ್ಟಿ’ ಬಿಡುಗಡೆ ಮಾಡಿದ ನಂತರ ಬಿಸಿಸಿಐ ಎಜಿಎಂನಲ್ಲಿ ಪಾಲ್ಗೊಳ್ಳುವ ಘಟಕಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.

ಮಣಿಪುರ, ಉತ್ತರ ಪ್ರದೇಶ, ತಮಿಳುನಾಡು, ಹರಿಯಾಣ, ಮಹಾರಾಷ್ಟ್ರ, ರೈಲ್ವೇಸ್‌, ಸರ್ವಿಸಸ್‌ ಮತ್ತು ಅಸೋಸಿಯೇಷನ್‌ ಆಫ್‌ ಇಂಡಿ ಯನ್‌ ಯೂನಿವರ್ಸಿಟೀಸ್‌ (ಎಐಯು) ಈ ಎಂಟು ಘಟಕಗಳಾಗಿವೆ. 

Post Comments (+)