ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್‌ನಲ್ಲಿ ಜೇಮ್ಸ್‌ ಆ್ಯಂಡರ್ಸನ್‌ 650 ವಿಕೆಟ್‌ ಸಾಧನೆ

Last Updated 14 ಜೂನ್ 2022, 4:11 IST
ಅಕ್ಷರ ಗಾತ್ರ

ನಾಟಿಂಗ್‌ಹ್ಯಾಂ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ವೇಗದ ಬೌಲರ್‌ ಎನಿಸಿಕೊಂಡಿರುವ ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್ಸನ್‌ ಅವರು 650 ವಿಕೆಟ್‌ಗಳ ಸಾಧನೆ ಮಾಡಿದರು.

ನಾಟಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ನ ಮೂರನೇ ದಿನವಾದ ಸೋಮವಾರ, ಟಾಮ್‌ ಲಥಾಮ್‌ ವಿಕೆಟ್‌ ಪಡೆದು ಈ ಮೈಲಿಗಲ್ಲು ಸಾಧಿಸಿದರು.

ಟೆಸ್ಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳಲ್ಲಿ ಮುತ್ತಯ್ಯ ಮುರಳೀಧರನ್‌ (800) ಮತ್ತು ಶೇನ್‌ ವಾರ್ನ್‌ (708) ಬಳಿಕ ಮೂರನೇ ಸ್ಥಾನದಲ್ಲಿ ಆ್ಯಂಡರ್‌ಸನ್‌ ಇದ್ದಾರೆ. ಆದರೆ ವೇಗಿಗಳಲ್ಲಿ ಅವರು ಮೊದಲಿಗರಾಗಿದ್ದಾರೆ.

ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 14 ರನ್‌ಗಳ ಮುನ್ನಡೆ ಗಳಿಸಿದೆ. ಎರಡನೇ ಇನಿಂಗ್ಸ್‌ನಲ್ಲಿ ಸೋಮವಾರ ಚಹಾ ವಿರಾಮದ ವೇಳೆಗೆ 4 ವಿಕೆಟ್‌ಗೆ 151 ರನ್‌ ಗಳಿಸಿದ್ದು, ಒಟ್ಟಾರೆ 165 ರನ್‌ಗಳ ಮುನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್‌
ಮೊದಲ ಇನಿಂಗ್ಸ್: ನ್ಯೂಜಿಲೆಂಡ್‌:
553, ಇಂಗ್ಲೆಂಡ್‌ 539 (128.2 ಓವರ್) ಜೋ ರೂಟ್‌ 176, ಬೆನ್‌ ಸ್ಟೋಕ್ಸ್ 46, ಬೆನ್‌ ವೋಕ್ಸ್ 56, ಟ್ರೆಂಟ್‌ ಬೌಲ್ಟ್‌ 106ಕ್ಕೆ 5, ಬ್ರೇಸ್‌ವೆಲ್‌ 62ಕ್ಕೆ 3)
ಎರಡನೇ ಇನಿಂಗ್ಸ್‌: ನ್ಯೂಜಿಲೆಂಡ್ 4ಕ್ಕೆ 151 (49 ಓವರ್‌) ವಿಲ್‌ ಯಂಗ್ 56,ಡೆವೊನ್‌ ಕಾನ್ವೆ 52, ಜೇಮ್ಸ್‌ ಆ್ಯಂಡರ್‌ಸನ್‌ 18ಕ್ಕೆ 1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT