ವೈರಾಣು ಸೋಂಕಿಗೆ ಒಳಗಾದ ಇಂಗ್ಲೆಂಡ್ ಆಟಗಾರರು; ಮೊದಲ ಟೆಸ್ಟ್ ನಡೆಯುವುದು ಅನುಮಾನ

ರಾವಲ್ಪಿಂಡಿ: ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ಪಾಕಿಸ್ತಾನ ಪ್ರವಾಸದಲ್ಲಿರುವ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ಆಟಗಾರರು ವೈರಾಣು ಸೋಂಕಿಗೆ ಒಳಗಾಗಿದ್ದಾರೆ.
ಇದರಿಂದಾಗಿ ಡಿಸೆಂಬರ್ 1ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯವು ನಿಗದಿತ ವೇಳಾಪಟ್ಟಿಯಂತೆ ಆರಂಭವಾಗುವುದು ಅನುಮಾನವೆನಿಸಿದೆ.
ಇದನ್ನೂ ಓದಿ: IND vs NZ: ಅಂತಿಮ ಏಕದಿನ ಮಳೆಯಿಂದಾಗಿ ರದ್ದು; ನ್ಯೂಜಿಲೆಂಡ್ಗೆ ಸರಣಿ ಗೆಲುವು
ಈ ಕುರಿತು ಟ್ವೀಟ್ ಮಾಡಿರುವ ಇಂಗ್ಲೆಂಡ್ ಕ್ರಿಕೆಟ್, ಕೆಲವು ಆಟಗಾರರು ವೈರಾಣು ಸೋಂಕಿಗೆ ಒಳಗಾದ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ ಆರಂಭಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ (ಪಿಸಿಬಿ) ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದೆ. ಪಿಸಿಬಿ ಕೂಡ ಇದನ್ನು ಖಚಿತಪಡಿಸಿದೆ.
We are in discussions with the PCB regarding the start of the first Test due to a viral infection within our camp.#PAKvENG https://t.co/EeHAN4jU63
— England Cricket (@englandcricket) November 30, 2022
ಅನಾರೋಗ್ಯದ ಹಿನ್ನೆಲೆಯಲ್ಲಿ ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ಇಂಗ್ಲೆಂಡ್ ತಂಡದ ಆಟಗಾರರು ಬುಧವಾರ ಅಭ್ಯಾಸ ನಡೆಸಲಿಲ್ಲ.
ರಾವಲ್ಪಿಂಡಿ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಈಗಾಗಲೇ ಆಡುವ ಬಳಗವನ್ನು ಪ್ರಕಟಿಸಿದೆ. ಲಿಯಮ್ ಲಿವಿಂಗ್‌ಸ್ಟೋನ್‌ಗೆ ಚೊಚ್ಚಲ ಟೆಸ್ಟ್ ಕ್ಯಾಪ್ ನೀಡಲಾಗಿದೆ.
2005ರ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡವು ಪಾಕ್ ನೆಲದಲ್ಲಿ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ.
The PCB and ECB are in discussions regarding the commencement of the 1st #PAKvENG Test as some England players are down with viral infection. The PCB continues to monitor the situation, is in contact with the ECB and will provide further updates in due course.
— Pakistan Cricket (@TheRealPCB) November 30, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.