ಬ್ರಿಸ್ಟಲ್ (ಪಿಟಿಐ): ಫ್ರೆಯಾ ಕೆಂಪ್ ಅವರ ಆಲ್ರೌಂಡ್ ಆಟದ ಬಲದಿಂದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಪ್ರವಾಸಿ ಭಾರತ ತಂಡದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 26 ರನ್ಗಳ ಜಯ ಸಾಧಿಸಿತು. ಅದರೊಂದಿಗೆ, ಸರಣಿಯಲ್ಲಿ 1–1 ಸಮಬಲ ಸಾಧಿಸಿತು. ಮೂರನೇ ಹಾಗೂ ಅಂತಿಮ ಪಂದ್ಯವು ಮಂಗಳವಾರ ನಡೆಯಲಿದೆ.

ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು ಸ್ಪಿನ್ನರ್ ಶ್ರೀಚರಣಿ (25ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ನಡುವೆಯೂ ನಿಗದಿತ ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಕೆಂಪ್ ಅವರು ಕೇವಲ 13 ಎಸೆತಗಳಲ್ಲಿ ಅಜೇಯ 39 ರನ್ ಸೂರೆ ಮಾಡಿದರು.

ಸವಾಲಿನ ಗುರಿ ಬೆನ್ನಟ್ಟಿದ ಹರ್ಮನ್ಪ್ರೀತ್ ಕೌರ್ ಪಡೆಯು 9 ವಿಕೆಟ್ಗೆ 142 ರನ್ ಗಳಿಸಿ ಓವರ್ ಪೂರೈಸಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 20 ಓವರ್ಗಳಲ್ಲಿ 5 ವಿಕೆಟ್ಗೆ 168 (ಫ್ರೆಯಾ ಕೆಂಪ್ ಔಟಾಗದೇ 39, ಡ್ಯಾನಿ ವ್ಯಾಟ್ ಹಾಜ್ 29; ಶ್ರೀಚರಣಿ 25ಕ್ಕೆ3). ಭಾರತ: 20 ಓವರ್ಗಳಲ್ಲಿ 9 ವಿಕೆಟ್ಗೆ 142 (ಸ್ಮೃತಿ ಮಂದಾನ 32, ಯಶ್ಟಿಕಾ ಭಾಟಿಯಾ 33; ಶಾರ್ಲಟ್ ಡೀನ್ 20ಕ್ಕೆ2, ಲಾರೆನ್ ಬೆಲ್ 33ಕ್ಕೆ2, ಫ್ರೆಯಾ ಕೆಂಪ್ 15ಕ್ಕೆ2).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-4-1869853170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.