ಭಾನುವಾರ, ಸೆಪ್ಟೆಂಬರ್ 15, 2019
27 °C

ಚಿಣ್ಣರೊಂದಿಗೆ ಬೆರೆತ ಚಾಂಪಿಯನ್ನರು

Published:
Updated:

ಲಂಡನ್: ಸೋಮವಾರ ಲಂಡನ್‌ನ ದಿ ಓವಲ್‌ ಮೈದಾನದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಇಲ್ಲಿ ನಿಗದಿಯಾಗಿದ್ದ ವಿಶ್ವಕಪ್‌ ವಿಜೇತರ ಸಂಭ್ರಮಾಚಣೆಯ ಕಾರ್ಯಕ್ರಮ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು.

ಮೈದಾನದಲ್ಲಿ ಸೇರಿದ್ದ ಚಿಣ್ಣರು ನಾಯಕ ಇಯಾನ್‌ ಮಾರ್ಗನ್‌ ಅವರ ಕೈಚೆಲ್ಲಿದ್ದ ಟ್ರೋಫಿಯನ್ನು ಹತ್ತಿರದಿಂದ ಕಣ್ತುಂಬಿಕೊಂಡರು. ಅದರ ಮೇಲೆ ಬೆರಳಾಡಿಸಿ ಪುಳಕಿತರಾದರು.

ಇನ್ನು ಕೆಲ ಪುಟಾಣಿಗಳು ವಿಶ್ವವಿಜೇತರ ಹಸ್ತಾಕ್ಷರ ಪಡೆದರಲ್ಲದೆ, ದಿಗ್ಗಜರ ಜೊತೆ ಫೋಟೊ ತೆಗೆಸಿಕೊಂಡು ಪುನೀತರಾದರು.

ವಿಶ್ವಕಪ್‌ ಹೀರೊಗಳು ಅಂಗಳಕ್ಕೆ ಕಾಲಿಟ್ಟ ಕ್ಷಣ ಮಕ್ಕಳಿಂದ ತುಂಬಿಹೋಗಿದ್ದ ಗ್ಯಾಲರಿಗಳಲ್ಲಿ ಹರ್ಷೋದ್ಗಾರ ಮೊಳಗಿದವು.

Post Comments (+)