ಭಾನುವಾರ, ಆಗಸ್ಟ್ 18, 2019
22 °C

ಆ್ಯಷಸ್ ಟೆಸ್ಟ್‌: ಇಂಗ್ಲೆಂಡ್‌ಗೆ ಬ್ಯಾಟಿಂಗ್ ವೈಫಲ್ಯ

Published:
Updated:
Prajavani

ಲಂಡನ್ (ಎಎಫ್‌ಪಿ): ಮಧ್ಯಮ ವೇಗಿಗಳಾದ ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್‌ ಮತ್ತು ಆಫ್ ಸ್ಪಿನ್ನರ್ ನೇಥನ್ ಲಯನ್ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಕಂಗಾಲಾದರು. ಹೀಗಾಗಿ ಆ್ಯಷಸ್ ಟೆಸ್ಟ್‌ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯರು 258 ರನ್‌ಗಳಿಗೆ ಆಲೌಟಾದರು.

ಆರಂಭಿಕ ಬ್ಯಾಟ್ಸ್‌ಮನ್ ರೋರಿ ಬರ್ನ್ಸ್‌ (53; 127 ಎಸೆತ, 7 ಬೌಂಡರಿ) ಮತ್ತು ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದ ವಿಕೆಟ್ ಕೀಪರ್ ಜಾನಿ ಬೇಸ್ಟೊ (52; 95 ಎ, 7 ಬೌಂ) ‍ಪ್ರತಿರೋಧ ಒಡ್ಡಿ ಅರ್ಧಶತಕ ಗಳಿಸಿದರು. ಆದರೆ ನಾಯಕ ಜೋ ರೂಟ್ ಸೇರಿದಂತೆ ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳು ಕಡಿಮೆ ಮೊತ್ತಕ್ಕೆ ಕ್ರೀಸ್ ತೊರೆದರು.  

ಮೂರು ವಿಕೆಟ್ ಗಳಿಸಿದ ಲಯನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ವಿಕೆಟ್‌ (355) ಡೆನಿಸ್ ಲಿಲಿ ದಾಖಲೆಯನ್ನು ಸರಿಗಟ್ಟಿದರು. ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ದಿನದಾಟದ ಮುಕ್ತಾಯಕ್ಕೆ ....ರನ್‌ ಗಳಿಸಿದೆ. ವಾರ್ನರ್ 3 ರನ್ ಗಳಿಸಿ ಔಟಾದರು.

ಮೊದಲ ದಿನದಾಟ ಮಳೆಯಿಂದ ರದ್ದಾಗಿತ್ತು. ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 251 ರನ್‌ಗಳಿಂದ ಗೆದ್ದಿತ್ತು.

Post Comments (+)