ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ದಂಡ: ಎಂಟು ಡಬ್ಲ್ಯುಟಿಸಿ ಪಾಯಿಂಟ್ ಕಡಿತ

Last Updated 17 ಡಿಸೆಂಬರ್ 2021, 16:02 IST
ಅಕ್ಷರ ಗಾತ್ರ

ದುಬೈ: ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನಿಧಾನಗತಿಯ ಓವರ್‌ ರೇಟ್ ಹೊಂದಿದ್ದ ಕಾರಣಕ್ಕೆ ಕಡಿತ ಮಾಡಿದ್ದು ಐದು ಡಬ್ಲ್ಯುಟಿಸಿ ಪಾಯಿಂಟ್‌ಗಳಲ್ಲ. ಒಟ್ಟು ಎಂಟು ಅಂಕ ಕಡಿತ ಮಾಡಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಿಳಿಸಿದೆ.

ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ನಿಗದಿಯ ಸಮಯದಲ್ಲಿ ಎಂಟು ಓವರ್‌ಗಳಷ್ಟು ಕಡಿಮೆ ಬೌಲಿಂಗ್ ಮಾಡಿತ್ತು. ಆದ್ದರಿಂದ ಪೂರ್ಣ ಪಂದ್ಯ ಶುಲ್ಕ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ನ ಎಂಟು ಪಾಯಿಂಟ್‌ಗಳನ್ನು ಕಡಿತ ಮಾಡಲಾಗುವುದು ಎಂದು ತಿಳಿಸಿದೆ. ಈ ಮೊದಲು ಐದು ಪಾಯಿಂಟ್ಸ್‌ ಕಡಿತ ಮಾಡಲಾಗಿದೆ ಎಂದೂ ಐಸಿಸಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT