4
ಇಂಗ್ಲೆಂಡ್‌ ಲಯನ್ಸ್‌ ಎದುರಿನ ಏಕದಿನ ಪಂದ್ಯ

ಶ್ರೇಯಸ್‌ ಬಳಗಕ್ಕೆ ಸೋಲು

Published:
Updated:
ರಿಷಭ್‌ ಪಂತ್‌

ಡರ್ಬಿ: ಟಾಮ್‌ ಹೆಲ್ಮ್‌ (33ಕ್ಕೆ3) ಮತ್ತು ಲಿಯಾಮ್‌ ಡಾಸನ್‌ (30ಕ್ಕೆ4) ಅವರ ದಾಳಿಗೆ ಕಂಗೆಟ್ಟ ಭಾರತ ‘ಎ’ ತಂಡ ಇಂಗ್ಲೆಂಡ್‌ ಲಯನ್ಸ್‌ ಎದುರಿನ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋತಿದೆ.

ಕೌಂಟಿ ಮೈದಾನದಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟ್‌ ಮಾಡಿದ ಶ್ರೇಯಸ್‌ ಅಯ್ಯರ್‌ ಬಳಗ 46.3 ಓವರ್‌ಗಳಲ್ಲಿ 232ರನ್‌ಗಳಿಗೆ ಆಲೌಟ್‌ ಆಯಿತು.

ಸುಲಭ ಗುರಿಯನ್ನು ಇಂಗ್ಲೆಂಡ್‌ ಲಯನ್ಸ್‌ 41.5 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಬ್ಯಾಟಿಂಗ್‌ ಆರಂಭಿಸಿದ ಭಾರತ ‘ಎ’ ತಂಡ ಟಾಮ್‌ ಹೆಲ್ಮ್‌ ಬೌಲ್‌ ಮಾಡಿದ ಐದನೇ ಓವರ್‌ನಲ್ಲಿ ಪೃಥ್ವಿ ಶಾ (7; 11ಎ) ಅವರ ವಿಕೆಟ್‌ ಕಳೆದುಕೊಂಡಿತು.

ಮಯಂಕ್‌ ಅಗರವಾಲ್ (23; 24ಎ, 4ಬೌಂ) ಮತ್ತು ಶುಭಮನ್‌ ಗಿಲ್‌ (37; 40ಎ, 4ಬೌಂ, 1ಸಿ) ಕೂಡಾ ಬೇಗನೆ ವಿಕೆಟ್‌ ಒಪ್ಪಿಸಿದರು.

ನಾಯಕ ಶ್ರೇಯಸ್‌ (42; 50ಎ, 3ಬೌಂ, 1ಸಿ) ಮತ್ತು ರಿಷಭ್‌ ಪಂತ್‌ (64; 55ಎ, 7ಬೌಂ, 2ಸಿ) ಉತ್ತಮ ಜೊತೆಯಾಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದ್ದರಿಂದ ದೊಡ್ಡ ಮೊತ್ತ ಕಲೆಹಾಕುವ ತಂಡದ ಕನಸು ಕೈಗೂಡಲಿಲ್ಲ.

ಗುರಿ ಬೆನ್ನಟ್ಟಿದ ಸ್ಟೀವ್‌ ಮುಲ್ಲನಿ ಪಡೆ ಟಾಮ್‌ ಕೊಹ್ಲರ್‌ ಕ್ಯಾಡ್‌ಮೋರ್‌ (7) ಅವರ ವಿಕೆಟ್‌ ಬೇಗನೆ ಕಳೆದುಕೊಂಡಿತು.

ನಂತರ ನಿಕ್‌ ಗುಬಿನ್ಸ್‌ (ಔಟಾಗದೆ 128; 132ಎ, 10ಬೌಂ, 2ಸಿ) ಮತ್ತು ಸ್ಯಾಮ್‌ ಹೇನ್‌ (54; 68ಎ, 3ಬೌಂ) ಶ್ರೇಯಸ್‌ ಪಡೆಯ ಬೌಲರ್‌ಗಳನ್ನು ಕಾಡಿ ಇಂಗ್ಲೆಂಡ್‌ ಲಯನ್ಸ್‌ಗೆ ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್‌:

ಭಾರತ ‘ಎ’, 46.3 ಓವರ್‌ಗಳಲ್ಲಿ 232 (ಮಯಂಕ್‌ ಅಗರವಾಲ್‌ 23, ಶುಭಮನ್‌ ಗಿಲ್‌ 37, ಶ್ರೇಯಸ್‌ ಅಯ್ಯರ್‌ 42, ರಿಷಭ್‌ ಪಂತ್ 64, ಅಕ್ಷರ್‌ ಪಟೇಲ್‌ 25, ದೀಪಕ್‌ ಚಾಹರ್‌ 21; ಟಾಮ್‌ ಹೆಲ್ಮ್‌ 33ಕ್ಕೆ3, ರೀಸ್‌ ಟೋಪ್ಲೆ 35ಕ್ಕೆ1, ಕ್ರಿಸ್‌ ಜೋರ್ಡನ್‌ 47ಕ್ಕೆ1, ಲಿಯಾಮ್‌ ಡಾಸನ್‌ 30ಕ್ಕೆ4).

ಇಂಗ್ಲೆಂಡ್‌ ಲಯನ್ಸ್‌: 41.5 ಓವರ್‌ಗಳಲ್ಲಿ 3 ವಿಕೆಟ್‌ಗೆ 236 (ನಿಕ್‌ ಗುಬಿನ್ಸ್‌ ಔಟಾಗದೆ 128, ಸ್ಯಾಮ್‌ ಹೇನ್‌ 54, ಲಿಯಾಮ್‌ ಲಿವಿಂಗ್‌ಸ್ಟೋನ್‌ 27; ಶಾರ್ದೂಲ್‌ ಠಾಕೂರ್‌ 30ಕ್ಕೆ2, ಅಕ್ಷರ್‌ ಪಟೇಲ್‌ 40ಕ್ಕೆ1).

ಫಲಿತಾಂಶ: ಇಂಗ್ಲೆಂಡ್‌ ಲಯನ್ಸ್‌ಗೆ 7 ವಿಕೆಟ್‌ ಜಯ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !