ಅಂಪೈರ್‌ ನಿರ್ಧಾರಕ್ಕೆ ವಿರೋಧ: ಜೇಮ್ಸ್‌ ಆ್ಯಂಡರ್ಸನ್‌ಗೆ ದಂಡ

7

ಅಂಪೈರ್‌ ನಿರ್ಧಾರಕ್ಕೆ ವಿರೋಧ: ಜೇಮ್ಸ್‌ ಆ್ಯಂಡರ್ಸನ್‌ಗೆ ದಂಡ

Published:
Updated:

ಲಂಡನ್‌ : ಅಂಪೈರ್‌ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಇಂಗ್ಲೆಂಡ್‌ ತಂಡದ ವೇಗಿ ಜೇಮ್ಸ್‌ ಆ‌್ಯಂಡರ್ಸನ್‌ ಅವರಿಗೆ ಪಂದ್ಯದ ಸಂಭಾವನೆಯ ಶೇ 15ರಷ್ಟು ದಂಡ ವಿಧಿಸಲಾಗಿದೆ. 

ಭಾರತದ ಮೊದಲ ಇನಿಂಗ್ಸ್‌ನ 29ನೇ ಓವರ್‌ನಲ್ಲಿ ನಡೆದ ಘಟನೆ ಈ ಬೆಳವಣಿಗೆಗೆ ಕಾರಣವಾಗಿದೆ. ಆ ಓವರ್‌ನಲ್ಲಿ ಆ್ಯಂಡರ್ಸನ್‌ ಅವರು ಎಸೆದ ಚೆಂಡಿನ ಗತಿ ಅಂದಾಜಿಸುವಲ್ಲಿ ವಿರಾಟ್‌ ಕೊಹ್ಲಿ ವಿಫಲರಾದರು. ಚೆಂಡು ಅವರ ಪ್ಯಾಡ್‌ಗೆ ಬಡಿಯಿತು. ಆ್ಯಂಡರ್ಸನ್‌, ಎಲ್‌ಬಿಡಬ್ಲ್ಯು ನಿರ್ಧಾರಕ್ಕಾಗಿ ಅಂಪೈರ್‌ ಕುಮಾರ್‌ ಧರ್ಮಸೇನಾ ಅವರಿಗೆ ಮನವಿ ಮಾಡಿದರು. ಕುಮಾರ್‌, ನಾಟ್‌ಔಟ್‌ ಎಂದು ಸುಮ್ಮನಾದರು. ಕೂಡಲೇ ಅಸಮಾಧಾನ ವ್ಯಕ್ತಪಡಿಸಿದ ಜೇಮ್ಸ್‌ ಧರ್ಮಸೇನಾ ಅವರೊಂದಿಗೆ ವಾದಕ್ಕಿಳಿದರು. 

‘ಆ್ಯಂಡರ್ಸನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ನಿಯಮ 2.1.5 ಉಲ್ಲಂಘನೆ ಮಾಡಿದ್ದಾರೆ’ ಎಂದು ಪಂದ್ಯದ ರೆಫರಿ ಆ್ಯಂಡಿ ಪೈಕ್ರಾಫ್ಟ್‌ ತಿಳಿಸಿದ್ದಾರೆ. 

ಜೇಮ್ಸ್‌ ಅವರು ತಾವು ಎಸಗಿದ ತಪ್ಪನ್ನು ಒಪ್ಪಿಕೊಂಡಿದ್ದು, ದಂಡ ಕಟ್ಟುವುದಾಗಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !