ಟ್ವೆಂಟಿ–20 ಕ್ರಿಕೆಟ್‌: ಅಲೆಕ್ಸ್‌ ಆಟಕ್ಕೆ ಸೋತ ಭಾರತ

7

ಟ್ವೆಂಟಿ–20 ಕ್ರಿಕೆಟ್‌: ಅಲೆಕ್ಸ್‌ ಆಟಕ್ಕೆ ಸೋತ ಭಾರತ

Published:
Updated:

ಕಾರ್ಡಿಫ್‌:  ಇಂಗ್ಲೆಂಡ್‌ನ ಅಲೆಕ್ಸ್‌ ಹೇಲ್ಸ್‌ ಆಡಿದ ಅಮೋಘ ಆಟದಿಂದಾಗಿ ಭಾರತ ತಂಡ ಎರಡನೇ ಟ್ವೆಂಟಿ–20 ಕ್ರಿಕೆಟ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿತು. 

ಭಾರತ ನೀಡಿದ್ದ 149ರನ್‌ಗಳ ಗುರಿಯನ್ನು 19.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಇಂಗ್ಲೆಂಡ್‌ ಗೆಲುವಿನ ನಗೆ ಬೀರಿತು. 

41 ಎಸೆತಗಳಲ್ಲಿ 58 ರನ್‌ ಗಳಿಸಿದ ಅಲೆಕ್ಸ್‌ ಪಂದ್ಯಾಂತದವರೆಗೂ ಕ್ರಿಜ್‌ನಲ್ಲಿದ್ದರು. ಜಾನಿ ಬೈರ್‌ಸ್ಟೊವ್‌(28 ರನ್‌) ಮತ್ತು ಇಯಾನ್‌ ಮಾರ್ಗನ್‌(17)  ನೀಡಿದ ರನ್‌ ಕೊಡುಗೆಯೂ ಗೆಲುವಿಗೆ ನೆರವಾಯಿತು. 

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 148 ರನ್‌ ಗಳಿಸಿತು. ರೋಹಿತ್ ಶರ್ಮಾ ಮತ್ತು ಕಳೆದ ಪಂದ್ಯದಲ್ಲಿ ಶತಕ ಗಳಿಸಿದ ಕೆ.ಎಲ್‌.ರಾಹುಲ್ ತಲಾ ಆರು ರನ್‌ ಗಳಿಸಿ ಔಟಾದರೆ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್‌ ಕೂಡ ಬೇಗನೇ ವಾಪಸಾದರು.

ಐದನೇ ಓವರ್‌ನಲ್ಲಿ 22 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಆಸರೆಯಾದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರು 57 ರನ್ ಸೇರಿಸಿದರು. ರೈನಾ (27; 20 ಎ, 1 ಸಿ, 2 ಬೌಂ) ಔಟಾದ ನಂತರ ಕೊಹ್ಲಿ (47; 38ಎ, 2 ಸಿ, 1 ಬೌಂ) ಮತ್ತು ಮಹೇಂದ್ರ ಸಿಂಗ್ ದೋನಿ (32; 24 ಎ, 5 ಬೌಂ) ಉತ್ತಮ ಬ್ಯಾಟಿಂಗ್ ಮಾಡಿ ತಂಡವನ್ನು ಮೂರಂಕಿ ಮೊತ್ತ ದಾಟಿಸಿದರು.

ಸಂಕ್ಷಿಪ್ತ ಸ್ಕೋರು: 
ಭಾರತ:
20 ಓವರ್‌ಗಳಲ್ಲಿ 5ಕ್ಕೆ 148 (ವಿರಾಟ್ ಕೊಹ್ಲಿ 47, ಸುರೇಶ್‌ ರೈನಾ 27, ಮಹೇಂದ್ರ ಸಿಂಗ್ ದೋನಿ 32);
ಇಂಗ್ಲೆಂಡ್‌: 19.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 149 (ಜೇಸನ್ ರಾಯ್‌ 15, ಜೋಸ್ ಬಟ್ಲರ್‌ 14, ಜಾಯ್‌ ರೂಟ್‌ 9,  ಅಲೆಕ್ಸ್ ಹೇಲ್ಸ್‌ 58*, ಜಾನಿ ಬೈರ್‌ಸ್ಟೊವ್‌ 28, ಇಯಾನ್‌ ಮಾರ್ಗನ್‌ 17*, ಡೇವಿಡ್‌ ವಿಲ್ಲಿ 3
(ಉಮೇಶ್‌ ಯಾದವ್‌ 36ಕ್ಕೆ2, ಯಜುವೇಂದ್ರ ಚಾಹಲ್‌ 28ಕ್ಕೆ1, ಭುವನೇಶ್ವರ್ ಕುಮಾರ್‌ 19ಕ್ಕೆ 1, ಹಾರ್ದಿಕ್‌ ಪಾಂಡ್ಯೆ 28ಕ್ಕೆ 1) 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !