ಲಂಡನ್: ಅನುಭವಿ ಆಲ್ರೌಂಡರ್ ನ್ಯಾಟ್ ಶಿವರ್ ಬ್ರಂಟ್ ಅವರು 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. 15 ಆಟಗಾರ್ತಿಯರ ತಂಡವನ್ನು ಇಸಿಬಿ ಮಂಗಳವಾರ ಪ್ರಕಟಿಸಿದೆ.

ಬ್ರಂಟ್ ನಾಯಕತ್ವದ ತಂಡವು ಮೇ ಮತ್ತು ಜೂನ್ನಲ್ಲಿ ನಡೆಯುವ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿಯೂ ಕಣಕ್ಕಿಳಿಯಲಿದೆ. 33 ವರ್ಷದ ಬ್ರಂಟ್ ಅವರಿಗೆ ಇದು ಏಳನೇ ಟಿ20 ವಿಶ್ವಕಪ್ ಟೂರ್ನಿಯಾಗಿದೆ.

ಭಾರತ ಮಹಿಳಾ ತಂಡವು ಮೂರು ಟಿ20 ಪಂದ್ಯಗಳು ಮತ್ತು ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಟಿ20 ಪಂದ್ಯಗಳು ಕ್ರಮವಾಗಿ ಮೇ 28, ಮೇ 30 ಮತ್ತು ಜೂನ್ 2ರಂದು ನಡೆಯಲಿದೆ. ಟೆಸ್ಟ್ ಪಂದ್ಯ ಜುಲೈ 10ರಿಂದ 13ರವರೆಗೆ ಲಾರ್ಡ್ಸ್ನಲ್ಲಿ ನಡೆಯಲಿದೆ.

ಇಂಗ್ಲೆಂಡ್ ತಂಡದಲ್ಲಿ ಸರ್ರೆಯ ಸ್ಪಿನ್ನರ್ ಟಿಲ್ಲಿ ಕಾರ್ಟೀನ್ ಕೋಲ್ಮನ್, ವಾರ್ವಿಕ್ಷೈರ್ನ ಇಸ್ಸಿ ವಾಂಗ್ ಮತ್ತು ಡರ್ಹ್ಯಾಮ್ನ ಲಾರೆನ್ ಫೈಲರ್ ಸ್ಥಾನ ಪಡೆದಿದ್ದು, ಅವರೆಲ್ಲರೂ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುವ ಅವಕಾಶ ಪಡೆದಿದ್ದಾರೆ. ಅನುಭವಿ ಬ್ಯಾಟರ್ ಸರ್ರೆಯ ಡ್ಯಾನಿ ವ್ಯಾಟ್-ಹಾಡ್ಜ್ ತಮ್ಮ ಎಂಟನೇ ಟಿ20 ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ.

ಆಲ್ರೌಂಡರ್ ಚಾರ್ಲಿ ಡೀನ್ ತಂಡಕ್ಕೆ ಉಪನಾಯಕಿಯಾಗಿದ್ದಾರೆ. ಹ್ಯಾಂಪ್ಶೈರ್ ಲಾರೆನ್ ಬೆಲ್ ಅವರು ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. 2009ರಲ್ಲಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ನಾಯಕಿಯಾಗಿದ್ದ ಶಾರ್ಲೆಟ್ ಮೇರಿ ಎಡ್ವರ್ಡ್ಸ್ ಅವರ ಮಾರ್ಗದರ್ಶನ ತಂಡಕ್ಕಿದೆ.

ತಂಡ ಹೀಗಿದೆ: ನಾಟ್ ಶಿವರ್ ಬ್ರಂಟ್ (ನಾಯಕಿ), ಚಾರ್ಲಿ ಡೀನ್ (ಉಪನಾಯಕಿ), ಲಾರೆನ್ ಬೆಲ್, ಆಲಿಸ್ ಕ್ಯಾಪ್ಸಿ, ಟಿಲ್ಲಿ ಕಾರ್ಟೀನ್ ಕೋಲ್ಮನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಡ್ಯಾನಿ ಗಿಬ್ಸನ್, ಆಮಿ ಜೋನ್ಸ್, ಫ್ರೇಯಾ ಕೆಂಪ್, ಹೀದರ್ ನೈಟ್, ಲಿನ್ಸೆ ಸ್ಮಿತ್, ಇಸ್ಸಿ ವಾಂಗ್, ಡ್ಯಾನಿ ವ್ಯಾಟ್ ಹಾಡ್ಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.