ಶನಿವಾರ, ಜನವರಿ 23, 2021
24 °C
ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ

ಕೋವಿಡ್‌ ಟೆಸ್ಟ್ ಪಾಸಾದ ಇಂಗ್ಲೆಂಡ್‌ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಕೋವಿಡ್‌ –19 ಪರೀಕ್ಷೆ ಪಾಸಾಗಿರುವ ಇಂಗ್ಲೆಂಡ್ ಕ್ರಿಕೆಟ್‌ ತಂಡವು ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಶನಿವಾರ ದ್ವೀಪರಾಷ್ಟ್ರಕ್ಕೆ ತೆರಳಲಿದೆ. ಜನವರಿ 14ರಿಂದ ಈ ಸರಣಿ ನಿಗದಿಯಾಗಿದೆ.

ಇಂಗ್ಲೆಂಡ್ ತಂಡದ ಆಟಗಾರರು ಹಾಗೂ ನೆರವು ಸಿಬ್ಬಂದಿಯು ಡಿಸೆಂಬರ್ 30ರಂದು ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು. ಎಲ್ಲರ ಫಲಿತಾಂಶ ‘ನೆಗೆಟಿವ್‌‘ ಬಂದಿತ್ತು.

‘ಶ್ರೀಲಂಕಾ ತಲುಪಿದ ಬಳಿಕ ತಂಡವು, ಹಂಬಟೋಟದಲ್ಲಿ 10 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕು‘ ಎಂದು ಸ್ಕೈ ಸ್ಪೋರ್ಟ್ಸ್ ವರದಿ ಮಾಡಿದೆ.

ಲಂಕಾದ ಗಾಲ್‌ನಲ್ಲಿ ಎರಡೂ ಪಂದ್ಯಗಳು ಕ್ರಮವಾಗಿ ಜನವರಿ 14ರಿಂದ 18 ಹಾಗೂ 22ರಿಂದ 26ರವರೆಗೆ ನಡೆಯಲಿವೆ.

ಉಭಯ ತಂಡಗಳ ನಡುವೆ ಹೋದ ವರ್ಷ ಮಾರ್ಚ್‌ನಲ್ಲಿ ನಿಗದಿಯಾಗಿದ್ದ ಸರಣಿಯನ್ನು ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಕೋವಿಡ್ ಕಾಲದಲ್ಲಿ ಇಂಗ್ಲೆಂಡ್‌ ಎರಡನೇ ಬಾರಿ ಕ್ರಿಕೆಟ್ ಪ್ರವಾಸ ಕೈಗೊಳ್ಳುತ್ತಿದೆ. ಹೋದ ವರ್ಷದ ನವೆಂಬರ್‌ನಲ್ಲಿ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ತಂಡದ ಇಬ್ಬರು ಆಟಗಾರರು ಕೊರೊನಾ ಸೋಂಕಿಗೆ ಒಳಗಾದ ಬಳಿಕ ಸರಣಿಯನ್ನು ರದ್ದುಗೊಳಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು