ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 1st ODI | ಬೂಮ್ರಾಗೆ 6 ವಿಕೆಟ್‌: 110ಕ್ಕೆ ಇಂಗ್ಲೆಂಡ್‌ ಆಲೌಟ್‌

Last Updated 12 ಜುಲೈ 2022, 14:29 IST
ಅಕ್ಷರ ಗಾತ್ರ

ಲಂಡನ್‌: ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಇಂಗ್ಲೆಂಡ್‌ ತಂಡ 25.2 ಓವರ್‌ಗಳಲ್ಲಿ 110 ರನ್‌ಗಳಿಗೆ ಸರ್ವಪತನ ಕಂಡಿದೆ.

ಜೇಸನ್‌ ರಾಯ್‌ ಶೂನ್ಯಕ್ಕೆ ಔಟ್‌ ಆಗುವ ಮೂಲಕ ಇಂಗ್ಲೆಂಡ್‌ ಆರಂಭಿಕ ಆಘಾತ ಅನುಭವಿಸಿತು. ನಂತರ ಬಂದ ಜೋ ರೂಟ್‌, ಬೆನ್‌ಸ್ಟೋಕ್ಸ್‌ ಕೂಡ ಶೂನ್ಯ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡ್‌ ಸಂಕಷ್ಟಕ್ಕೆ ತುತ್ತಾಯಿತು. ಜೋಸ್‌ ಬಟ್ಲರ್‌ (30), ಡೇವಿಡ್‌ ವಿಲ್ಲಿ (21) ನಿಧಾನವಾಗಿ ರನ್‌ ಗಳಿಸಲಾರಂಭಿಸಿದರಾದರೂ, ಭಾರತದ ಬೌಲರ್‌ಗಳ ಪಾರಮ್ಯದ ಮುಂದೆ ಇಂಗ್ಲೆಂಡ್‌ ಮಂಕಾಯಿತು.

ಅಂತಿಮವಾಗಿ 25.2 ಓವರ್‌ಗಳಲ್ಲಿ 110ಕ್ಕೆ ಇಂಗ್ಲೆಂಡ್‌ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತದ ಪರ ಜಸ್ಪ್ರಿತ್‌ ಬೂಮ್ರಾ 6 ವಿಕೆಟ್‌ ಗಳಿಸಿ ಮಿಂಚಿದರು. ಮೊಹಮದ್‌ ಶಮಿ 3 ವಿಕೆಟ್‌ ಪಡೆದರೆ, ಪ್ರಸಿದ್ಧ ಕೃಷ್ಣ ಒಂದು ವಿಕೆಟ್‌ ಪಡೆದರು.

3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಕೆನ್ನಿಂಗ್ಟನ್‌ನ ಓವಲ್‌ನಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT