ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಏಕದಿನ ಪಂದ್ಯ: ಇಂಗ್ಲೆಂಡ್‌ನ ಮೂವರ ಶತಕ, ಒಂದು ಅರ್ಧ ಶತಕ!

ಅಕ್ಷರ ಗಾತ್ರ

ಆಮ್‌ಸ್ಟೆಲ್ವೀನ್: ನೆದರ್ಲೆಂಡ್ಸ್‌ ವಿರುದ್ಧದ 50 ಓವರ್‌ಗಳ ಪಂದ್ಯದಲ್ಲಿ ಇಂಗ್ಲೆಂಡ್‌ನ ಮೂವರು ಬ್ಯಾಟರ್‌ಗಳು ಶತಕ ದಾಖಲಿಸಿದ್ದು, ಓರ್ವ ಬ್ಯಾಟರ್‌ ಅರ್ಧ ಶತಕ ಗಳಿಸಿದ್ದಾರೆ.

ಆಮ್‌ಸ್ಟೆಲ್ವೀನ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ 122 ರನ್‌ಗಳನ್ನು ಪೇರಿಸಿದ್ದಾರೆ. 93 ಎಸೆತಗಳನ್ನು ಎದುರಿಸಿ 3 ಸಿಕ್ಸರ್‌ ಸೇರಿದಂತೆ 14 ಬೌಂಡರಿಗಳನ್ನು ಬಾರಿಸಿದ್ದಾರೆ.

ಕೇವಲ 70 ಎಸೆತಗಳಿಗೆ 162 ರನ್‌ಗಳನ್ನು ಚಚ್ಚುವ ಮೂಲಕ ಜೋಸ್‌ ಬಟ್ಲರ್‌ ಅಬ್ಬರಿಸಿದ್ದಾರೆ. ಅಜೇಯರಾಗುಳಿದ ಬಟ್ಲರ್‌ 14 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಪಂದ್ಯವೊಂದರಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದವರ ಪಟ್ಟಿ ಸೇರಿದ್ದಾರೆ. ಬಟ್ಲರ್‌ ಬೊಕ್ಕಸದಲ್ಲಿ 7 ಬೌಂಡರಿಗಳು ಸೇರಿವೆ.

ಡೇವಿಡ್‌ ಮಲಾನ್‌ ಅವರು 109 ಎಸೆತಗಳಲ್ಲಿ 125 ರನ್‌ ದಾಖಲಿಸಿ ಗಮನ ಸೆಳೆದಿದ್ದಾರೆ. ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರು ಅಜೇಯ 66 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ. ಇದರಲ್ಲಿ 6 ಸಿಕ್ಸರ್‌ಗಳು, 6 ಬೌಂಡರಿಗಳು ಸೇರಿವೆ.

ಮೂವರ ಶತಕ ಮತ್ತು ಒಂದು ಅರ್ಧ ಶತಕ ಸೇರಿ ಒಟ್ಟು 498 ರನ್‌ಗಳ ವಿಶ್ವದಾಖಲೆಯ ಮೊತ್ತವನ್ನು ಇಂಗ್ಲೆಂಡ್‌ ಗಳಿಸಿದೆ. ಈ ಹಿಂದೆ ತಾನೇ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಮುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT