ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ENG vs PAK ಟೆಸ್ಟ್ | ಜಾಕ್ ಕ್ರಾಲಿ ಶತಕ; ಬೃಹತ್‌ ಮೊತ್ತದತ್ತ ಇಂಗ್ಲೆಂಡ್

Last Updated 21 ಆಗಸ್ಟ್ 2020, 20:34 IST
ಅಕ್ಷರ ಗಾತ್ರ

ಸೌತಾಂಪ್ಟನ್: ಜಾಕ್ ಕ್ರಾಲಿ (ಬ್ಯಾಟಿಂಗ್ 171; 269ಎಸೆತ, 19 ಬೌಂಡರಿ) ಅವರ ಆಕರ್ಷಕ ಶತಕದ ಬಲದಿಂದ ಇಂಗ್ಲೆಂಡ್ ತಂಡವು ಶುಕ್ರವಾರ ಆರಂಭವಾದ ಪಾಕಿಸ್ತಾನ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಗಳಿಸುವತ್ತ ದಾಪುಗಾಲಿಟ್ಟಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾದ ರೋರಿ ಬರ್ನ್ಸ್ ಮತ್ತು ಡಾನ್ ಸಿಬ್ಲಿ ಅವರು ಬೇಗನೇ ಔಟಾದರು. ಈ ಹೊತ್ತಿನಲ್ಲಿ ಕ್ರಾಲಿ ಆಟ ಕಳೆಗಟ್ಟಿತು. ಅವರ ಶತಕದ ಬಲದಿಂದ ಇಂಗ್ಲೆಂಡ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 4ಕ್ಕೆ332 ರನ್‌ ಗಳಿಸಿದೆ.

ನಾಯಕ ಜೋ ರೂಟ್ (29) ಮತ್ತು ಓಲಿ ಪೋಪ್ (3) ಕೂಡ ಬೇಗನೆ ನಿರ್ಗಮಿಸಿದರು. ಕ್ರಾಲಿಗೆ ಉತ್ತಮ ಬೆಂಬಲ ನೀಡಿದಜೋಸ್ ಬಟ್ಲರ್ (ಬ್ಯಾಟಿಂಗ್ 87) ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಇಂಗ್ಲೆಂಡ್:
90 ಓವರ್‌ಗಳಲ್ಲಿ 4ಕ್ಕೆ332 (ಜಾಕ್ ಕ್ರಾಲಿ ಬ್ಯಾಟಿಂಗ್ 171, ಜೋ ರೂಟ್ 28, ಜೋಸ್ ಬಟ್ಲರ್ ಬ್ಯಾಟಿಂಗ್ 87, ಯಾಸೀರ್ ಶಾ 107ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT