ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ENG Vs PAK ಟೆಸ್ಟ್‌ ಕ್ರಿಕೆಟ್‌: ಗೆಲುವಿನ ಹೊಸ್ತಿಲಲ್ಲಿ ಇಂಗ್ಲೆಂಡ್‌

Last Updated 20 ಡಿಸೆಂಬರ್ 2022, 4:50 IST
ಅಕ್ಷರ ಗಾತ್ರ

ಕರಾಚಿ: ಲೆಗ್‌ ಸ್ಪಿನ್ನರ್‌ ರೆಹಾನ್‌ ಅಹ್ಮದ್‌ (48ಕ್ಕೆ 5) ಅವರ ಕೈಚಳಕದ ನೆರವಿನಿಂದ ಇಂಗ್ಲೆಂಡ್‌ ತಂಡ ಪಾಕಿಸ್ತಾನ ವಿರುದ್ಧದ ಮೂರನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿದೆ.

ಕರಾಚಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲುವಿಗೆ 167 ರನ್‌ಗಳ ಗುರಿ ಪಡೆದಿರುವ ಇಂಗ್ಲೆಂಡ್‌, ಮೂರನೇ ದಿನವಾದ ಸೋಮವಾರದ ಆಟದ ಅಂತ್ಯಕ್ಕೆ 17 ಓವರ್‌ಗಳಲ್ಲಿ 2 ವಿಕೆಟ್‌ಗೆ 112 ರನ್‌ ಗಳಿಸಿದೆ. ಸರಣಿಯಲ್ಲಿ ‘ಕ್ಲೀನ್‌ಸ್ವೀಪ್‌’ ಸಾಧನೆ ಮಾಡಲು ಇಂಗ್ಲೆಂಡ್‌ಗೆ 55 ರನ್‌ಗಳು ಬೇಕು.

ಪಾಕ್‌ ತಂಡ ಎರಡನೇ ಇನಿಂಗ್ಸ್‌ನಲ್ಲಿ 216 ರನ್‌ಗಳಿಗೆ ಆಲೌಟಾಯಿತು. 18 ವರ್ಷ ರೆಹಾನ್‌ ಅವರು ಚೊಚ್ಚಲ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್‌ ಪಡೆದ ಅತಿಕಿರಿಯ ಆಟಗಾರ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಪಾಕಿಸ್ತಾನ 304. ಇಂಗ್ಲೆಂಡ್‌ 354. ಎರಡನೇ ಇನಿಂಗ್ಸ್‌: ಪಾಕಿಸ್ತಾನ 74.5 ಓವರ್‌ಗಳಲ್ಲಿ 216 (ಬಾಬರ್‌ ಅಜಂ 54, ಸವೂದ್‌ ಶಕೀಲ್‌ 53, ರೆಹಾನ್‌ ಅಹ್ಮದ್‌ 48ಕ್ಕೆ5, ಜಾಕ್‌ ಲೀಚ್‌ 72ಕ್ಕೆ 3) ಇಂಗ್ಲೆಂಡ್‌ 17 ಓವರ್‌ಗಳಲ್ಲಿ 2 ವಿಕೆಟ್‌ಗೆ 112 (ಜಾಕ್‌ ಕ್ರಾಲಿ 41, ಬೆನ್‌ ಡಕೆಟ್‌ ಬ್ಯಾಟಿಂಗ್‌ 50, ರೆಹಾನ್‌ ಅಹ್ಮದ್‌ 10, ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ 10, ಅಬ್ರಾರ್‌ ಅಹ್ಮದ್‌ 43ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT