ಟಾಂಟನ್ : ಅಲೀಸ್ ಕ್ಯಾಪ್ಸಿ ಹಾಗೂ ಹೀದರ್ ನೈಟ್ ಅವರ ಶತಕದ ಜೊತೆಯಾಟದ ಬಲದಿಂದ ಆತಿಥೇಯ ಇಂಗ್ಲೆಂಡ್ ಮಹಿಳಾ ತಂಡವು ಭಾರತ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆರು ವಿಕೆಟ್ಗಳಿಂದ ಜಯಿಸಿತು. ಅದರೊಂದಿಗೆ, 2–1ರಿಂದ ಸರಣಿ ಕೈವಶ ಮಾಡಿಕೊಂಡಿತು.

ಇಂಗ್ಲೆಂಡ್ ತಂಡದ ನಾಯಕಿ ಶಾರ್ಲಿ ಡೀನ್ ಅವರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಅಜೇಯ ಅರ್ಧಶತಕದ ಬಲದಿಂದ 20 ಓವರ್ಗಳಲ್ಲಿ 5 ವಿಕೆಟ್ಗೆ 180 ರನ್ ಪೇರಿಸಿತು. ಲಾರೆನ್ ಬೆಲ್ (36ಕ್ಕೆ2) ಪರಿಣಾಮಕಾರಿ ಬೌಲಿಂಗ್ ಮಾಡಿದರು.

ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 38 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಜೊತೆಯಾದ ಅಲೀಸ್ (82; 43ಎ) ಹಾಗೂ ಹೀದರ್ (ಔಟಾಗದೇ 70; 42ಎ) ನಾಲ್ಕನೇ ವಿಕೆಟ್ಗೆ 137 ರನ್ ಸೇರಿಸಿದರು. ಡೀನ್ ಪಡೆ 18.3 ಓವರ್ಗಳಲ್ಲಿ 4 ವಿಕೆಟ್ಗೆ 184 ರನ್ ಬಾರಿಸಿ ಸಂಭ್ರಮಿಸಿತು. ಅರುಂಧತಿ ರೆಡ್ಡಿ ಹಾಗೂ ಕ್ರಾಂತಿ ಗೌಡ್ ತಲಾ ಎರಡು ವಿಕೆಟ್ ಪಡೆದರು.

ಅಲೀಸ್ ಅವರು ಪಂದ್ಯದ ಹಾಗೂ ಸರಣಿಯ ಆಟಗಾರ್ತಿ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್ಗಳಲ್ಲಿ 5 ವಿಕೆಟ್ಗೆ 180 (ಯಷ್ಟಿಕಾ ಭಾಟಿಯಾ 32, ಹರ್ಮನ್ ಪ್ರೀತ್ ಕೌರ್ 56, ದೀಪ್ತಿ ಶರ್ಮಾ 32; ಲಾರೆನ್ ಬೆಲ್ 36ಕ್ಕೆ2). ಇಂಗ್ಲೆಂಡ್: 18.3 ಓವರ್ಗಳಲ್ಲಿ 4 ವಿಕೆಟ್ಗೆ 184 (ಅಲೀಸ್ ಕ್ಯಾಪ್ಸಿ 82, ಹೀದರ್ ನೈಟ್ ಔಟಾಗದೇ 70; ಅರುಂಧತಿ ರೆಡ್ಡಿ 31ಕ್ಕೆ2, ಕ್ರಾಂತಿ ಗೌಡ್ 40ಕ್ಕೆ2).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-4-1906657670

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.