ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋ ರೂಟ್ ಶತಕ: ಇಂಗ್ಲೆಂಡ್‌ಗೆ ಜಯದ ಪುಳಕ

Last Updated 5 ಜೂನ್ 2022, 19:31 IST
ಅಕ್ಷರ ಗಾತ್ರ

ಲಂಡನ್: ಅಜೇಯ ಶತಕ ಗಳಿಸಿದ ಜೋ ರೂಟ್ ಇಂಗ್ಲೆಂಡ್ ತಂಡಕ್ಕೆ ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಜಯದ ಕಾಣಿಕೆ ನೀಡಿದರು.

ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾನುವಾರ ತಂಡದ ನಿಕಟಪೂರ್ವ ನಾಯಕ ರೂಟ್ (ಅಜೇಯ 115; 170ಎಸೆತ, 4X12) ಮತ್ತು ನಾಯಕನಾಗಿ ಮೊದಲ ಬಾರಿ ಕಣಕ್ಕಿಳಿದಿರುವ ಬೆನ್‌ಸ್ಟೋಕ್ಸ್ (54;110ಎ, 4X5, 6X3) ಅವರ ಆಟದಿಂದ ಇಂಗ್ಲೆಂಡ್ 5 ವಿಕೆಟ್‌ಗಳಿಂದ ಜಯಿಸಿತು.

ಶನಿವಾರ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್‌ ಗೆಲುವಿಗೆ 278 ರನ್‌ಗಳ ಗುರಿ ನೀಡಿತ್ತು. ಆದರೆ ದಿನದಾಟದ ಮುಕ್ತಯಕ್ಕೆ ತಂಡವು 69 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ರೂಟ್ ಮತ್ತು ಸ್ಟೋಕ್ಸ್ ತಂಡಕ್ಕೆ ಆಸರೆಯಾಗಿದ್ದರು. ಭಾನುವಾರವೂ ತಮ್ಮ ಆಟ ಮುಂದುವರಿಸಿದ ಜೋಡಿಯು ಐದನೇ ವಿಕೆಟ್ ಜೊತೆಯಾಟದಲ್ಲಿ 90 ರನ್ ಸೇರಿಸಿತು. ಜೆಮಿಸನ್ ಬೌಲಿಂಗ್‌ನಲ್ಲಿ ಬೆನ್ ಔಟಾಗುವುದರೊಂದಿಗೆ ಜತೆಯಾಟ ಮುರಿಯಿತು. ರೂಟ್ ಜೊತೆಗೂಡಿದ ಬೆನ್ ಫೋಕ್ಸ್‌ (ಔಟಾಗದೆ 32; 92ಎ) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್ 40 ಓವರ್‌ಗಳಲ್ಲಿ 132, ಇಂಗ್ಲೆಂಡ್: 42.5 ಓವರ್‌ಗಳಲ್ಲಿ 141, ಎರಡನೇ ಇನಿಂಗ್ಸ್: ನ್ಯೂಜಿಲೆಂಡ್: 91.3 ಓವರ್‌ಗಳಲ್ಲಿ 285, ಇಂಗ್ಲೆಂಡ್: 78.5 ಓವರ್‌ಗಳಲ್ಲಿ 5ಕ್ಕೆ279 (ಜೋ ರೂಟ್ ಔಟಾಗದೆ 115, ಬೆನ್ ಸ್ಟೋಕ್ಸ್ 54, ಬೆನ್ ಫೋಕ್ಸ್ ಔಟಾಗದೆ 32, ಕೈಲ್ ಜೆಮಿಸನ್ 79ಕ್ಕೆ4) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT