ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಶೀವರ್–ಬ್ರಂಟ್ ದಾಂಪತ್ಯ ಜೀವನಕ್ಕೆ

ಲಂಡನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನತಾಲಿ ಶೀವರ್ ಮತ್ತು ಕ್ಯಾಥರಿನ್ ಬ್ರಂಟ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯನ್ನು ಅಭಿನಂದಿಸಿ ಸಾಮಾಜಿಕ ತಾಣಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್ ಪೋಸ್ಟ್ ಹಾಕಿದೆ.
2017ರಲ್ಲಿ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಚಾಂಪಿಯನ್ ಆದ ಇಂಗ್ಲೆಂಡ್ ತಂಡದಲ್ಲಿ ಇವರಿಬ್ಬರೂ ಆಡಿದ್ದರು. ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಭಾರತ ಮಹಿಳಾ ತಂಡವನ್ನು ಮಣಿಸಿತ್ತು. ಈ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ರನ್ನರ್ ಅಪ್ ಆಗಿತ್ತು. ಆ ಟೂರ್ನಿಯಲ್ಲೂ ಇವರಿಬ್ಬರು ಆಡಿದ್ದರು.
ಬ್ರಂಟ್ ಜೊತೆ ನಿಶ್ಚಿತಾರ್ಥ ಆಗಿರುವುದಾಗಿ ನಥಾಲಿ 2019ರಲ್ಲಿ ಘೋಷಿಸಿದ್ದರು. ಕೋವಿಡ್–19ರಿಂದಾಗಿ ಮದುವೆಯನ್ನು ಮುಂದೂಡಲಾಗಿತ್ತು.
‘ವಾರಾಂತ್ಯದಲ್ಲಿ ವಿವಾಹವಾದ ಕ್ಯಾಥರಿನ್ ಬ್ರಂಟ್ ಮತ್ತು ನತಾಲಿ ಶೀವರ್ ಅವರಿಗೆ ನಮ್ಮ ಹೃದಯಸ್ಪರ್ಶಿ ಅಭಿನಂದನೆ’ ಎಂದು ಇಂಗ್ಲೆಂಡ್ ಕ್ರಿಕೆಟ್ ಟ್ವೀಟ್ ಮಾಡಿದೆ. ನಾಯಕಿ ಹೀದರ್ ನೈಟ್, ಡ್ಯಾನಿಯಲಿ ವ್ಯಾಟ್, ಇಸಾ ಗುಹಾ ಮತ್ತು ಜೆನಿ ಗನ್ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
Our warmest congratulations to Katherine Brunt & Nat Sciver who got married over the weekend ❤️ pic.twitter.com/8xgu7WxtFW
— England Cricket (@englandcricket) May 30, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.