ಶುಕ್ರವಾರ, ಆಗಸ್ಟ್ 14, 2020
27 °C

ENGvsWI ಟೆಸ್ಟ್ | ವುಡ್ ದಿಟ್ಟ ಆಟ: ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್‌ಗೆ ಜಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್: ಜರ್ಮೈನ್ ಬ್ಲ್ಯಾಕ್‌ವುಡ್ (95, 154ಎಸೆತ, 12 ಬೌಂಡರಿ) ಶತಕ ಪೂರೈಸಲಿಲ್ಲ. ಆದರೆ ವೆಸ್ಟ್ ಇಂಡೀಸ್ ತಂಡಕ್ಕೆ ಜಯದ ಕಾಣಿಕೆ ನೀಡಿದರು.

ಕೊರೊನಾ ಕಾಲದ ಮೊದಲ ಟೆಸ್ಟ್ ಕ್ರಿಕೆಟ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 4 ವಿಕೆಟ್‌ಗಳಿಂದ ಇಂಗ್ಲೆಂಡ್ ವಿರುದ್ಧ ಗೆದ್ದಿತು. ಮೂರು ಟೆಸ್ಟ್‌ಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.

ಪಂದ್ಯದ ಕೊನೆಯ ದಿನವಾದ ಭಾನುವಾರ ಆತಿಥೇಯ ಇಂಗ್ಲೆಂಡ್ ತಂಡವು ವಿಂಡೀಸ್‌ ಬಳಗಕ್ಕೆ 200 ರನ್‌ಗಳ ಗೆಲುವಿನ ಗುರಿ ನೀಡಿತು.  ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್ (45ಕ್ಕೆ3) ಅವರ ದಾಳಿಗೆ ವಿಂಡೀಸ್‌ನ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪಡೆ ಕುಸಿಯಿತು.  ಕೇವಲ 100 ರನ್‌ಗಳಿಗೆ ನಾಲ್ಕು ವಿಕೆಟ್‌ಗಳು ಪತನವಾದವು. ಇದರಿಂದಾಗಿ ಒತ್ತಡದಲ್ಲಿದ್ದ ಪ್ರವಾಸಿ ಬಳಗವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದವರು ಬ್ಲ್ಯಾಕ್‌ವುಡ್. ಅವರಿಗೆ ಶೇನ್ ಡೋರಿಚ್ (20) ಉತ್ತಮ ಜೊತೆ ನೀಡಿದರು. ಗೆಲುವಿಗೆ 11 ರನ್‌ಗಳ ಅಗತ್ಯವಿದ್ದಾಗ ಬ್ಲ್ಯಾಕ್‌ವುಡ್ ಔಟಾದರು. ಆದರೆ, ಕ್ರೀಸ್‌ನಲ್ಲಿದ್ದ ನಾಯಕ ಜೇಸನ್ ಹೋಲ್ಡರ್ ಅವರು ತಂಡವನ್ನು ಜಯದ ದಡ ಸೇರಿಸಿದರು. 

ಶನಿವಾರ ಇಂಗ್ಲೆಂಡ್ ತಂಡವು 8 ವಿಕೆಟ್‌ಗಳಿಗೆ 284 ರನ್‌ ಗಳಿಸಿತ್ತು. ಕೊನೆಯ ದಿನ ಬೆಳಿಗ್ಗೆ ಕ್ರೀಸ್‌ನಲ್ಲಿದ್ದ ಜೋಫ್ರಾ (23 ರನ್) ಆಟದ ಫಲವಾಗಿ ತಂಡವು 300 ಗಡಿ ದಾಟಿತು. 313 ರನ್‌ಗಳಿಗೆ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್
ಇಂಗ್ಲೆಂಡ್:
204, ವೆಸ್ಟ್ ಇಂಡೀಸ್: 318

ಎರಡನೇ ಇನಿಂಗ್ಸ್
ಇಂಗ್ಲೆಂಡ್ 313, ವೆಸ್ಟ್ ಇಂಡೀಸ್: 64.2 ಓವರ್‌ಗಳಲ್ಲಿ 6ಕ್ಕೆ200 (ರಾಸ್ಟನ್ ಚೇಸ್ 37, ಜರ್ಮೈನ್ ಬ್ಲ್ಯಾಕ್‌ವುಡ್ 95, ಶೇನ್ ಡೋರಿಚ್ 20, ಜೇಸನ್ ಹೋಲ್ಡರ್ ಔಟಾಗದೆ 14, ಜೋಫ್ರಾ ಆರ್ಚರ್ 45ಕ್ಕೆ3)

ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 4 ವಿಕೆಟ್‌ಗಳ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು