ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಿಂದ ಇಂಗ್ಲೆಂಡ್‌ ಕ್ರಿಕೆಟಿಗರಿಗೆ ಲಾಭ: ಏಯಾನ್ ಮಾರ್ಗನ್

Last Updated 11 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಆಡುವುದರಿಂದ ತಮ್ಮದೇಶದ ಆಟಗಾರರಿಗೆ ಬಹಳ ದೊಡ್ಡ ಲಾಭವಾಗಿದೆ. ಜೊತೆಗೆ ಅಮೂಲ್ಯವಾದ ಅನುಭವವೂ ದೊರೆತಿದೆ ಎಂದು ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ ಏಯಾನ್ ಮಾರ್ಗನ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಆಡುವ ಇಂಗ್ಲೆಂಡ್ ಆಟಗಾರರನ್ನು ಅಲ್ಲಿಯ ಮಾಜಿ ಕ್ರಿಕೆಟಿಗರು ಈಚೆಗೆ ಟೀಕಿಸಿದ್ದರು. ರಾಷ್ಟ್ರೀಯ ತಂಡಕ್ಕೆ ಆಧ್ಯತೆ ನೀಡಬೇಕು ಐಪಿಎಲ್‌ಗೆ ಅಲ್ಲ ಎಂದಿದ್ದರು.

ಈ ಕುರಿತು ಗುರುವಾರ ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ ಮಾರ್ಗನ್, ’ಐಪಿಎಲ್‌ನಿಂದ ನಮಗೆ ಬಹಳ ಲಾಭವಾಗಿದೆ ಅದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಐಪಿಎಲ್ ಅನುಭವವು ನಮ್ಮ ಆಟವನ್ನು ಉತ್ಕೃಷ್ಟಗೊಳಿಸಿದೆ. 2019ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಲು ಕಾರಣವಾದ ಅಂಶಗಳಲ್ಲಿ ಇದು ಕೂಡ ಪ್ರಮುಖವಾದದ್ದು‘ ಎಂದರು.

’ಟಿ20 ವಿಶ್ವಕಪ್ ಟೂರ್ನಿ ಸಮೀಪಿಸುತ್ತಿದೆ. ಇಲ್ಲಿಯೇ ನಡೆಯಲಿರುವ ಟೂರ್ನಿಯಲ್ಲಿ ನಾವು ಆಡಲಿದ್ದೇವೆ. ಅದಕ್ಕೂ ಮುನ್ನ ಈ ಸರಣಿಯಲ್ಲ ಆಡುತ್ತಿರುವುದು ಒಳ್ಳೆಯದೇ ಆಗಿದೆ‘ ಎಂದು ಅಭಿಪ್ರಾಯಪಟ್ಟರು.

’ಐಪಿಎಲ್‌ನಲ್ಲಿ ಬೇರೆ ಬೇರೆ ದೇಶಗಳ ಆಟಗಾರರ ಜೊತೆಗೆ ಮತ್ತು ಎದುರಾಗಿ ಆಡುತ್ತೇವೆ. ಆ ಒಡನಾಟದಿಂದ ವಿನಿಮಯವಾಗುವ ಅನುಭವ, ಜ್ಞಾನವು ನಮ್ಮ ಆಟವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ‘ ಎಂದು ಮಾರ್ಗನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT