ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ನಾಯಕತ್ವ ತೊರೆಯದಿರಲು ವಿರಾಟ್ ಕೊಹ್ಲಿಗೆ ಹೇಳಲಾಗಿತ್ತು: ಚೇತನ್ ಶರ್ಮಾ

Last Updated 1 ಜನವರಿ 2022, 13:08 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಟಿ20 ಕ್ರಿಕೆಟ್ ತಂಡದ ನಾಯಕತ್ವವನ್ನು ತೊರೆಯುವ ನಿರ್ಧಾರವನ್ನು ಮರುಪರಿಶೀಲಿಸಬೇಕು. ಇದರಿಂದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡದ ಮೇಲೆ ಪರಿಣಾಮವಾಗುತ್ತದೆ ಎಂದು ವಿರಾಟ್ ಕೊಹ್ಲಿಗೆ ಹೇಳಿದ್ದೆವು ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಹೇಳಿದರು.

ಭಾರತ ತಂಡವು ಹೋದ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ನೀಡಿದ್ದ ಹೇಳಿಕೆಗೆ ಶರ್ಮಾ ಅವರ ಮಾತುಗಳು ವ್ಯತಿರಿಕ್ತವಾಗಿವೆ.

ಟಿ20 ತಂಡದ ನಾಯಕತ್ವ ತೊರೆಯದಂತೆ ತಮಗೆ ಯಾರೂ ಕೇಳಿರಲಿಲ್ಲ. ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸುವ 90 ನಿಮಿಷಗಳ ಮುನ್ನವಷ್ಟೇ ತಿಳಿಸಿದ್ದರು ಎಂದು ವಿರಾಟ್ ಹೇಳಿದ್ದು ಚರ್ಚೆಗೆ ಗ್ರಾಸವಾಗಿತ್ತು.

‘ಟಿ20 ವಿಶ್ವಕಪ್ ಸಮೀಪಿಸುತ್ತಿದ್ದ ಸಂದರ್ಭದ ಸಭೆಯಲ್ಲಿ ಈ ವಿಷಯವನ್ನು ಕೊಹ್ಲಿ ಹೇಳಿದಾಗ ಎಲ್ಲರಿಗೂ ಅಚ್ಚರಿ, ಆಘಾತ ವಾಗಿತ್ತು. ಈ ಕುರಿತು ಆಳವಾಗಿ ಯೋಚಿಸಿ. ವಿಶ್ವಕಪ್ ಮುಗಿದ ನಂತರ ಚರ್ಚಿಸೋಣ ಎಂದು ಹೇಳಿದ್ದೆವು. ಬಿಸಿಸಿಐ ಪದಾಧಿಕಾರಿಗಳೂ ಇದೇ ಮಾತುಗಳನ್ನು ಹೇಳಿದ್ದರು’ ಎಂದರು.

‘ಭಾರತದ ಕ್ರಿಕೆಟ್ ಹಿತದೃಷ್ಟಿಯಿಂದ ನಾಯಕತ್ವ ತೊರೆಯುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ವಿರಾಟ್‌ಗೆ ಹೇಳೀದೆವು. ಆದರೂ ಅವರು ನಾಯಕತ್ವ ತೊರೆಯುವ ದೃಢ ನಿಲುವು ತೆಗೆದುಕೊಂಡಿದ್ದರು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಉಳಿದ ಪದಾಧಿಕಾರಿಗಳು ಸಭೆಯಲ್ಲಿದ್ದರು. ಪ್ರತಿಯೊಬ್ಬರೂ ಕೊಹ್ಲಿಗೆ ಇದೇ ಮಾತು ಹೇಳಿದ್ದರು‘ ಎಂದು ಶರ್ಮಾ ತಿಳಿಸಿದರು.

‘ಟಿ20 ವಿಶ್ವಕಪ್ ಸನಿಹದಲ್ಲಿದ್ದ ಕಾರಣ ವಿಷಯವನ್ನು ಗೊಜಲು ಮಾಡದಿರಲು ನಿರ್ಧರಿಸಿದ್ದೆವು. ವಿರಾಟ್ ನಿರ್ಧಾರವನ್ನು ಗೌರವಿಸಿದ್ದೆವು. ಅವರು ತಂಡದ ಆಧಾರಸ್ತಂಭ’ ಎಂದರು.

‘ಟಿ20 ತಂಡದ ನಾಯಕತ್ವ ತೊರೆಯಲು ಅವರಿಗೆ ಯಾರೂ ಹೇಳಿರಲಿಲ್ಲ. ಅದು ಅವರ ಸ್ವಯಂ ನಿರ್ಧಾರವಾಗಿದೆ. ಆದರೆ ಏಕದಿನ ಕ್ರಿಕೆಟ್ ತಂಡದ ನಾಯಕತ್ವ ಕುರಿತು ಆಯ್ಕೆ ಸಮಿತಿಯು ನಿರ್ಧರಿಸಿತು. ಅದೊಂದು ಸಹಜವಾದ ಕ್ರಿಯೆ. ಬಿಳಿಚೆಂಡಿನ ಕ್ರಿಕೆಟ್‌ ತಂಡಗಳಿಗೆ ಒಬ್ಬರದ್ದೇ ನಾಯಕತ್ವ ಇದ್ದರೆ ಒಳಿತು ಎಂಬ ಕಾರಣಕ್ಕೆ ಕೈಗೊಂಡಿದ್ದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT