ಪಾಫೋಸ್: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಸೋಮವಾರ ಓಪನ್ ವಿಭಾಗದ ಎಲ್ಲ ಪಂದ್ಯಗಳು ಡ್ರಾ ಆದವು. ಅಂತೆಯೇ ಸತತ ಎರಡನೇ ದಿನ ಮಹಿಳೆಯರ ವಿಭಾಗದಲ್ಲೂ ನಿರ್ಣಾಯಕ ಫಲಿತಾಂಶಗಳು ದಾಖಲಾಗಲಿಲ್ಲ. ಭಾರತದ ಆರ್.ಪ್ರಜ್ಞಾನಂದ ಅವರು ಎರಡನೇ ಸುತ್ತಿನಲ್ಲಿ ಚೀನಾದ ವೀ ಯಿ ಜೊತೆ ಡ್ರಾ ಮಾಡಿಕೊಂಡರು.

ಪ್ರಜ್ಞಾನಂದ, ಅಮೆರಿಕದ ಫ್ಯಾಬಿಯಾನೊ ಕರುವಾನ ಮತ್ತು ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ ತಲಾ 1.5 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ದಿವ್ಯಾ ದೇಶಮುಖ್ ಅವರು ಸ್ವದೇಶದ ಆರ್. ವೈಶಾಲಿ ಅವರನ್ನು ಮಣಿಸುವ ಅವಕಾಶವನ್ನು ಕೈಚೆಲ್ಲಿದರು. ಆರಂಭದಿಂದಲೂ ಹಿನ್ನಡೆಯಲ್ಲಿದ್ದ ವೈಶಾಲಿ ಕೊನೆಯಲ್ಲಿ ಲಯ ಕಂಡುಕೊಂಡು ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.