ಇಂಡಿಯನ್ ಪ್ರೀಮಿಯರ್ ಲೀಗ್ 2026ನೇ ಆವೃತ್ತಿ ಆರಂಭವಾಗಿದೆ. ಪ್ರತಿನಿತ್ಯ ಹೊಸ ದಾಖಲೆಗಳು ನಿರ್ಮಾಣವಾಗುತ್ತಲೇ ಇವೆ. ವಿಶೇಷವಾಗಿ ಇಂದು (ಏಪ್ರಿಲ್ 2) ನಡೆದ ಪಂದ್ಯದಲ್ಲಿ ಕೆಕೆಆರ್ ಆರಂಭಿಕ ಬ್ಯಾಟರ್ ಫಿನ್ ಅಲೆನ್ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಎಚ್ ತಂಡವು 226 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಇಂಪ್ಯಾಕ್ಟ್ ಆಟಗಾರನಾಗಿ ಬಂದ ಫಿನ್ ಅಲೆನ್ ಮೊದಲ ಓವರ್ನಲ್ಲೆ ಅಬ್ಬರಿಸಿದರು.

ಎಸ್ಆರ್ಎಚ್ ಪರ ಮೊದಲ ಓವರ್ ಬೌಲಿಂಗ್ ಬಂದ ಡೇವಿಡ್ ಪೇನ್ ಅವರ ಮೇಲೆ ಸವಾರಿ ಮಾಡಿದ ಫಿನ್ ಅಲೆನ್, ಮೊದಲ ಓವರ್ನಲ್ಲೆ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 24 ರನ್ ಬಾರಿಸಿದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೊದಲ ಓವರ್ನಲ್ಲಿ ದಾಖಲಾದ ಜಂಟಿ ಎರಡನೇ ಅತ್ಯಧಿಕ ರನ್ ಆಗಿದೆ. ಅಗ್ರಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಇದ್ದಾರೆ.

ಐಪಿಎಲ್ನ ಮೊದಲ ಓವರ್ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರು

ಯಶಸ್ವಿ ಜೈಸ್ವಾಲ್ (ಕೋಲ್ಕತ್ತ) –26 ರನ್, ಕೆಕೆಆರ್ ವಿರುದ್ಧ– 2023

ಪೃಥ್ವಿ ಶಾ (ಡೆಲ್ಲಿ)– 24 ರನ್, ಕೆಕೆಆರ್ ವಿರುದ್ಧ– 2021ರಲ್ಲಿ

ಫಿನ್ ಅಲೆನ್ (ಕೋಲ್ಕತ್ತ)–24 ರನ್, ಎಸ್ಆರ್ಎಚ್ ವಿರುದ್ಧ– 2026ರಲ್ಲಿ

ಯಶಸ್ವಿ ಜೈಸ್ವಾಲ್ (ರಾಜಸ್ಥಾನ)– 22 ರನ್, ಪಂಜಾಬ್ ಕಿಂಗ್ಸ್ ವಿರುದ್ಧ–2025ರಲ್ಲಿ

ನಮನ್ ಓಜಾ (ರಾಜಸ್ಥಾನ)– 21 ರನ್ ಕೆಕೆಆರ್ ವಿರುದ್ಧ–2009ರಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.