ಸೋಮವಾರ, ಮೇ 23, 2022
28 °C
85 ಅಥ್ಲೀಟ್‌ಗಳ ಸ್ಪರ್ಧೆ; ಕೊರೊನಾ ಕಾಲಘಟ್ಟದ ಮೊದಲ ಕೂಟ, ದ್ಯುತಿ ಚಾಂದ್, ಕನ್ನಡತಿ ಪೂವಮ್ಮ ಸ್ಪರ್ಧೆ

ರಾಷ್ಟ್ರೀಯ ಸೀನಿಯರ್ ಟ್ರ್ಯಾಕ್‌–ಫೀಲ್ಡ್‌ ಕುಡ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಟಿಯಾಲ: ಕೊರೊನಾ ಕಾಲಘಟ್ಟದ ಮೊದಲ ಇಂಡಿಯನ್ ಗ್ರ್ಯಾನ್‌ ಪ್ರೀ ಸೀನಿಯರ್ ಟ್ರ್ಯಾಕ್‌ ಮತ್ತು ಫೀಲ್ಡ್‌ ಕೂಟವು ಗುರುವಾರ  ನಡೆಯಲಿದೆ.

85 ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ. ಕರ್ನಾಟಕದ ಎಂ.ಆರ್. ಪೂವಮ್ಮ, ಸ್ಪ್ರಿಂಟರ್ ದ್ಯುತಿ ಚಾಂದ್, ಅಂಜಲಿ ದೇವಿ, ಶುಭಾ ವೆಂಕಟೇಶನ್, ವಿ.ಎಂ. ಶಾಲಿನಿ ಮತ್ತು ಚಂದಾ ಅವರು ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲಿದ್ಧಾರೆ.

ಪುರುಷರ ವಿಭಾಗದಲ್ಲಿ ಓಟಗಾರ ಮೊಹಮ್ಮದ್ ಅನಾಸ್ ಯಾಹ್ಯಾ, ಅಮಿಯಾ ಕುಮಾರ್ ಮಲಿಕ್, ಅರೋಕ್ಯಾ ರಾಜೀವ, ನೊಹಾ ನಿರ್ಮಲ್ ಟಾಮ್, ಅಮೋಜ್ ಜೇಕಬ್, ಧಾರುಣ್ ಅಯ್ಯಸಾಮಿ ಮತ್ತು ಯುಗಂತ್ ಶೇಖರ್ ಸಿಂಗ್ ಕಣಕ್ಕಿಳಿಯುವರು.

ಆದರೆ ಪ್ರಮುಖ ಅಥ್ಲೀಟ್‌ಗಳಾದ ಹಿಮಾ ದಾಸ್, ನೀರಜ್ ಚೋಪ್ರಾ ಸ್ಪರ್ಧಿಸುತ್ತಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು