ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಪಂದ್ಯಗಳಿಂದ ತೀವ್ರ ಬಳಲಿಕೆ

ಕೆಕೆಆರ್‌ ತರಬೇತುದಾರ ಜಾಕ್‌ ಕಾಲಿಸ್‌ ಅಭಿಪ್ರಾಯ
Last Updated 14 ಏಪ್ರಿಲ್ 2019, 19:38 IST
ಅಕ್ಷರ ಗಾತ್ರ

ಕೋಲ್ಕತ್ತ : ಕಳೆದ 9 ದಿನಗಳಲ್ಲಿ ಐದು ಪಂದ್ಯಗಳನ್ನು ಆಡಿರುವುದರಿಂದ ತಂಡದ ಸದಸ್ಯರು ತೀವ್ರವಾಗಿ ಬಳಲಿದ್ದಾರೆ ಎಂದು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ತರಬೇತುದಾರ ಜಾಕ್‌ ಕಾಲಿಸ್‌ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಚೆನ್ನೈ ಸೂಪರ್‌ಕಿಂಗ್ಸ್‌ ವಿರುದ್ಧ ನಡೆದ 5 ವಿಕೆಟ್‌ಗಳಿಂದ ನೈಟ್‌ ರೈಡರ್ಸ್‌ ತಂಡ ಪರಭಾವಗೊಳ್ಳುವ ಮೂಲಕ ತಂಡವು ಸತತ ಮೂರನೇ ಸೋಲು ದಾಖಲಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌ ತಂಡವು ಏಳು ವಿಕೆಟ್‌ಗಳ ಅಂತರದಿಂದ ಸೋಲುಂಡಿತ್ತು. ಈ ಬೆಳವಣಿಗೆ ಕುರಿತಂತೆ ಕಾಲಿಸ್‌ ಅವರು ಈ ರೀತಿ ಹೇಳಿದ್ದಾರೆ.

‘ಕಳೆದ ಒಂಭತ್ತು ದಿನಗಳಲ್ಲಿ ಐದು ಪಂದ್ಯಗಳನ್ನು ಆಡಿದ ಕಾರಣ, ಆಟಗಾರರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಬಳಲಿದ್ದರು. ಮುಂದಿನ ಶುಕ್ರವಾರ ರಾಯಲ್‌ ಚಾಲೆಂಜರ್ಸ್‌ ವಿರುದ್ಧ ಕೆಕೆಆರ್‌ ತಂಡ ಮುಖಾಮುಖಿಯಾಗಲಿದೆ. ಇದರಿಂದ ಐದು ದಿನಗಳ ಕಾಲ ವಿಶ್ರಾಂತಿ ಸಿಕ್ಕಿದ್ದು, ಹಿಂದಿನ ಸೋಲಿನಿಂದ ಚೇತರಿಸಿಕೊಳ್ಳಲು ಇದು ಸಹಕಾರಿಯಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಉಳಿದಿರುವ ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಪಡೆದು ಪ್ಲೇ ಆಫ್‌ ಹಂತಕ್ಕೆ ತಲುಪಲಿದ್ದೇವೆ.ಆಟಗಾರರಿಗೆ ಸಾಧಿಸುವ ಹುಮ್ಮಸ್ಸಿದೆ. ಕೆಲವೊಂದು ತಪ್ಪುಗಳಿಂದ ನಾವು ಪಂದ್ಯಗಳನ್ನು ಕಳೆದುಕೊಂಡಿದ್ದೇವೆ. ಇದನ್ನು ಸರಿಪಡಿಸಿಕೊಂಡರೆ, ಮತ್ತೆ ಆಟದಲ್ಲಿ ಲಯ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ತಾಹಿರ್‌ಗೆ ಪ್ರಶಂಸೆ: ಕೆಕೆಆರ್‌ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಸೂಪರ್‌ಕಿಂಗ್ಸ್‌ ತಂಡದ 40 ವರ್ಷದ ಇಮ್ರಾನ್‌ ತಾಹಿರ್‌ ಅವರನ್ನು ಪ್ರಶಂಸಿದ ಅವರು, ಆಟಕ್ಕೆ ವಯಸ್ಸು ಮುಖ್ಯವಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT