ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಕ್ಸ್ ಶತಕ; ಇಂಗ್ಲೆಂಡ್‌ಗೆ ಪುಳಕ

Last Updated 7 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಗಾಲ್‌, ಶ್ರೀಲಂಕಾ: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಬೆನ್ ಫೋಕ್ಸ್‌, ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಇನಿಂಗ್ಸ್‌ ಮುನ್ನಡೆಯ ಪುಳಕ ನೀಡಿದರು.

ಮೊದಲ ದಿನವಾದ ಮಂಗಳವಾರ ಆರು ವಿಕೆಟ್‌ಗಳಿಗೆ 164 ರನ್‌ ಗಳಿಸಿ ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಫೋಕ್ಸ್‌ ಮತ್ತು ಸ್ಯಾಮ್ ಕರನ್‌ ಬಲ ತುಂಬಿದ್ದರು. 87 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದ ಫೋಕ್ಸ್‌ (107; 202 ಎಸೆತ, 10 ಬೌಂಡರಿ) ಬುಧವಾರ ಶತಕ ಪೂರೈಸಿದರು. ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡ 342 ರನ್‌ ಗಳಿಸಿತ್ತು. ಆತಿಥೇಯರನ್ನು 203 ರನ್‌ಗಳಿಗೆ ಆಲೌಟ್ ಮಾಡಿದ ಪ್ರವಾಸಿ ತಂಡ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ಕಳೆದುಕೊಳ್ಳದೆ 38 ರನ್‌ ಗಳಿಸಿದ್ದು ಒಟ್ಟಾರೆ 177 ರನ್‌ಗಳ ಮುನ್ನಡೆ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 97 ಓವರ್‌ಗಳಲ್ಲಿ 342 (ಕೀಟನ್ ಜೆನಿಂಗ್ಸ್‌ 46, ಜೋ ರೂಟ್‌ 35, ಜೋಸ್ ಬಟ್ಲರ್‌ 38, ಬೆನ್ ಫೋಕ್ಸ್‌ 107, ಸ್ಯಾಮ್ ಕರನ್‌ 48, ಆದಿಲ್ ರಶೀದ್‌ 35; ಸುರಂಗ್ ಲಕ್ಮಲ್‌ 73ಕ್ಕೆ3, ಕುಶಾಲ್ ‍ಪೆರೇರ 75ಕ್ಕೆ5); ಶ್ರೀಲಂಕಾ, ಮೊದಲ ಇನಿಂಗ್ಸ್‌: 68 ಓವರ್‌ಗಳಲ್ಲಿ 203 (ಏಂಜೆಲೊ ಮ್ಯಾಥ್ಯೂಸ್‌ 53, ಚಾಂಡಿಮಲ್‌ 33; ಲೀಚ್‌ 41ಕ್ಕೆ2, ಮೋಯಿನ್ ಅಲಿ 64ಕ್ಕೆ4, ಆದಿಲ್ ರಶೀದ್‌ 30ಕ್ಕೆ2); ಇಂಗ್ಲೆಂಡ್‌, ಎರಡನೇ ಇನಿಂಗ್ಸ್‌: 12 ಓವರ್‌ಗಳಲ್ಲಿ 38 (ಬರ್ನ್ಸ್‌ 11, ಜೆನಿಂಗ್ಸ್‌ 26).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT