ಶನಿವಾರ, ಮೇ 15, 2021
24 °C

ಫುಟ್‌ಬಾಲ್: ಭಾರತ–ಒಮಾನ್ ಪಂದ್ಯ ಡ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಒಂದು ವರ್ಷದ ನಂತರ ಅಂತರರಾಷ್ಟ್ರೀಯ ಪಂದ್ಯವಾಡಲು ಕಣಕ್ಕಿಳಿದ ಭಾರತ ಫುಟ್‌ಬಾಲ್ ತಂಡವು ಗುರುವಾರ ಒಮಾನ್ ಎದುರಿನ ಸ್ನೇಹಪರ ಪಂದ್ಯ ಜಯಿಸುವ ಅವಕಾಶವನ್ನು ಕೈಚೆಲ್ಲಿತು.

ಒಮಾನ್‌ಗೆ ’ಉಡುಗೊರೆ‘ ಗೋಲು ನೀಡಿದ ಭಾರತವು 1–1ರ ಡ್ರಾಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪಂದ್ಯದ 43ನೇ ನಿಮಿಷದಲ್ಲಿ ಚಿಂಗ್ಲೆನ್ಸನ್ ಸಿಂಗ್ ಒಮಾನ್‌ಗೆ ಉಡುಗೊರೆ ಗೋಲು ನೀಡಿದರು. ಇದರಿಂದಾಗಿ ಒಮಾನ್ ಮುನ್ನಡೆ ಪಡೆಯಿತು.

55ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಚುರುಕಾದ ಕಾಲ್ಚಳಕದಿಂದ ಗೋಲು ದಾಖಲಿಸಿ ಸಮಬಲ ಸಾಧನೆಗೆ ಕಾರಣರಾದರು. ನಂತರದ ಅವಧಿಯಲ್ಲಿ ಉಭಯ ತಂಡಗಳು ಗೋಲು ಗಳಿಸಲು ಮಾಡಿದ ಪ್ರಯತ್ನಗಳು ಫಲ ಕೊಡಲಿಲ್ಲ.

ಒಮಾನ್ ತಂಡವು ಹೋದ ಶನಿವಾರ ಜೋರ್ಡಾನ್ ಎದುರು ಆಡಿದ್ದ ಸ್ನೇಹಪರ ಪಂದ್ಯದಲ್ಲಿಯೂ ಡ್ರಾ ಮಾಡಿಕೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು