ಸೋಮವಾರ, ಜೂನ್ 21, 2021
29 °C

ಕ್ರಿಕೆಟಿಗ ಆರ್‌.ಪಿ.ಸಿಂಗ್‌ಗೆ ಪಿತೃವಿಯೋಗ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರುದ್ರ ಪ್ರತಾಪ್ ಸಿಂಗ್ ಅವರ ತಂದೆ ಶಿವಪ್ರಸಾದ್ ಸಿಂಗ್ ಅವರು ಕೋವಿಡ್‌ನಿಂದಾಗಿ ಬುಧವಾರ ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಎಡಗೈ ವೇಗಿ, 35 ವರ್ಷದ ರುದ್ರ ಪ್ರತಾಪ್ ಸಿಂಗ್‌ (ಆರ್.ಪಿ.ಸಿಂಗ್) ಅವರು ಟ್ವಿಟರ್‌ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ.

‘ನನ್ನ ತಂದೆ ಶಿವಪ್ರಸಾದ್ ಸಿಂಗ್ ನಿಧನದ ಸುದ್ದಿ ತಿಳಿಸಲು ತುಂಬ ದುಃಖವೆನಿಸುತ್ತಿದೆ. ಕೋವಿಡ್‌ನಿಂದ ಬಳಲುತ್ತಿದ್ದ ಅವರು ಬುಧವಾರ ಕೊನೆಯುಸಿರೆಳೆದರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಪ್ಪಾ‘ ಎಂದು ಸಿಂಗ್ ಟ್ವೀಟ್‌ ಮಾಡಿದ್ದಾರೆ.

ಆರ್‌.ಪಿ.ಸಿಂಗ್ ಅವರು ಭಾರತ ತಂಡದ ಪರ 14 ಟೆಸ್ಟ್, 58 ಏಕದಿನ ಹಾಗೂ 10 ಟ್ವೆಂಟಿ 20 ಪಂದ್ಯಗಳನ್ನು ಆಡಿದ್ದಾರೆ. 2018ರ ಸೆಪ್ಟೆಂಬರ್‌ನಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು