ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಮಾಜಿ ಅಂಪೈರ್‌ ಅಸಾದ್‌ ರವುಫ್‌ ಹೃದಯಾಘಾತದಿಂದ ನಿಧನ

Last Updated 15 ಸೆಪ್ಟೆಂಬರ್ 2022, 5:43 IST
ಅಕ್ಷರ ಗಾತ್ರ

ಲಾಹೋರ್‌:ಪಾಕಿಸ್ತಾನದ ಮಾಜಿ ಕ್ರಿಕೆಟ್‌ ಅಂಪೈರ್ ಅಸಾದ್‌ ರವುಫ್‌ (66) ಹೃದಯಾಘಾತದಿಂದ ಲಾಹೋರ್‌ನಲ್ಲಿ ನಿಧನರಾಗಿದ್ದಾರೆ.

ರವುಫ್‌ 2000ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಅಂಪೈರ್ ಆಗಿ ಕಾಣಿಸಿಕೊಂಡಿದ್ದರು. 64 ಟೆಸ್ಟ್‌ಗಳಲ್ಲಿ (49 ಆನ್-ಫೀಲ್ಡ್ ಅಂಪೈರ್ ಮತ್ತು 15 ಟಿವಿ ಅಂಪೈರ್ ಆಗಿ), 139 ಏಕದಿನ ಪಂದ್ಯಗಳಲ್ಲಿ ಮತ್ತು 28 ಟಿ20ಗಳಲ್ಲಿ ಅವರು ಅಂಪೈರ್ ಆಗಿದ್ದರು. 2000ರ ಮಧ್ಯದಲ್ಲಿ ಪಾಕಿಸ್ತಾನದ ಪ್ರಮುಖ ಅಂಪೈರ್‌ಗಳಲ್ಲಿ ರವುಫ್‌ ಅವರೂ ಒಬ್ಬರಾಗಿದ್ದರು.

ಲಾಹೋರ್‌ನಲ್ಲಿರುವ ತಮ್ಮ ಅಂಗಡಿಯಿಂದ ಬುಧವಾರ ರಾತ್ರಿ ಹಿಂತಿರುಗಿದ್ದ ರವುಫ್‌ ಅವರಿಗೆ ಹೃದಯಾಘಾತವಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಅಸಾದ್ ರವುಫ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅವರು ಉತ್ತಮ ಅಂಪೈರ್ ಆಗಿದ್ದರು. ಮಾತ್ರವಲ್ಲದೆ ಹಾಸ್ಯಪ್ರಜ್ಞೆಯನ್ನು ಹೊಂದಿದ್ದರು. ಅವರನ್ನು ಯಾವಾಗ ಕಂಡರೂ ನನ್ನ ಮುಖದಲ್ಲಿ ನಗು ಮೂಡುತ್ತಿತ್ತು. ಅವರ ಬಗ್ಗೆ ಯೋಚಿಸಿದಾಗಲೆಲ್ಲಾ ಸಂತೋಷವಾಗುತ್ತಿತ್ತು. ಅವರ ಕುಟುಂಬಕ್ಕಾದ ನಷ್ಟದ ಬಗ್ಗೆ ನನಗೆ ಸಹಾನುಭೂತಿ ಇದೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಟ್ವೀಟ್ ಮಾಡಿದ್ದಾರೆ.

ಅಂಪೈರ್‌ ಆಗುವುದಕ್ಕೂ ಮೊದಲು ‘ನ್ಯಾಷನಲ್ ಬ್ಯಾಂಕ್’ ಮತ್ತು ‘ರೈಲ್ವೇಸ್‌’ ಪರವಾಗಿ 71 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ರವುಫ್‌, ಏಪ್ರಿಲ್ 2006 ರಲ್ಲಿ ಐಸಿಸಿಯ ಎಲೈಟ್ ಪ್ಯಾನೆಲ್‌ಗೆ ನೇಮಕಗೊಂಡಿದ್ದರು.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ಆರೋಪಿಗಳ ಪಟ್ಟಿಯಲ್ಲಿ ಮುಂಬೈ ಪೊಲೀಸರು 2013 ರಲ್ಲಿ ರವುಫ್‌ ಅವರ ಹೆಸರನ್ನೂ ಸೇರಿಸಿದ್ದರು. ಇದರೊಂದಿಗೆ ರವುಫ್‌ ಅವರ ಅಂಫೈರ್‌ ವೃತ್ತಿಬದುಕು ಹಠಾತ್‌ ಅಂತ್ಯಗೊಂಡಿತ್ತು.

ಅದರೊಂದಿಗೆ ಆ ವರ್ಷ ಐಪಿಎಲ್ ಋತುವಿನ ಮಧ್ಯದಲ್ಲಿ ಅವರು ಭಾರತ ತೊರೆಯಬೇಕಾಯಿತು. ಚಾಂಪಿಯನ್ಸ್ ಟ್ರೋಫಿಯಿಂದಲೂ ಅವರನ್ನು ಕಿತ್ತೊಗೆಯಲಾಯಿತು. ಐಸಿಸಿ ಎಲೈಟ್ ಪ್ಯಾನೆಲ್‌ನಿಂದ ಕೈಬಿಡಲಾಯಿತು.

2016 ರಲ್ಲಿ, ಭ್ರಷ್ಟಾಚಾರ ಮತ್ತು ದುರ್ನಡತೆಯ ಆರೋಪಗಳ ಮೇಲೆ ಬಿಸಿಸಿಐ ಅವರ ಮೇಲೆ ಐದು ವರ್ಷಗಳ ನಿಷೇಧವನ್ನು ವಿಧಿಸಿತು.

ಇವುಗಳನ್ನೂಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT