ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: ಋತುರಾಜ್ ಎರಡನೇ ಶತಕ

Last Updated 9 ಡಿಸೆಂಬರ್ 2021, 15:28 IST
ಅಕ್ಷರ ಗಾತ್ರ

ರಾಜಕೋಟ್: ಮಹಾರಾಷ್ಟ್ರ ತಂಡದ ಋತುರಾಜ್ ಗಾಯಕವಾಡ್ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಶತಕ ಗಳಿಸಿದರು.

ಗುರುವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಋತುರಾಜ್ (154; 143ಎಸೆತ, 14ಬೌಂಡರಿ, 5ಸಿಕ್ಸರ್) ಭರ್ಜರಿ ಶತಕದ ಬಲದಿಂದ ಮಹಾರಾಷ್ಟ್ರ ತಂಡವು 8 ವಿಕೆಟ್‌ಗಳಿಂದ ಛತ್ತೀಸಗಢದ ಎದುರು ಜಯಿಸಿತು. ಋತುರಾಜ್ ಬುಧವಾರ ಮಧ್ಯಪ್ರದೇಶ ಎದುರಿನ ಪಂದ್ಯದಲ್ಲಿಯೂ ಶತಕ ಬಾರಿಸಿದ್ದರು.

ಸಂಕ್ಷಿಪ್ತ ಸ್ಕೋರು:

ತಿರುವನಂತಪುರ: ಬಿ ಗುಂಪು: ಬರೋಡಾ: 49.1 ಓವರ್‌ಗಳಲ್ಲಿ 210 (ವಿಷ್ಣು ಸೋಳಂಕಿ 94, ಅತಿಥ್ ಶೇಟ್ 24, ಶಮ್ಸ್‌ ಮುಲಾನಿ 40ಕ್ಕೆ2, ಪ್ರಶಾಂತ್ ಸೋಳಂಕಿ 61ಕ್ಕೆ3, ತನುಷ್ ಕೊಟ್ಯಾನ್ 44ಕ್ಕೆ3) ಮುಂಬೈ: 23 ಓವರ್‌ಗಳಲ್ಲಿ 3ಕ್ಕೆ100 (ಯಶಸ್ವಿ ಜೈಸ್ವಾಲ್ ಔಟಾಗದೆ 41, ಅರ್ಮಾನ್ ಜಾಫರ್ 21, ಕಾರ್ತಿಕ್ ಕಾಕಡೆ 20ಕ್ಕೆ1, ಕೃಣಾಲ್ ಪಾಂಡ್ಯ 20ಕ್ಕೆ1) ಫಲಿತಾಂಶ: ಮುಂಬೈ ತಂಡಕ್ಕೆ 13 ರನ್‌ಗಳಿಗೆ ಜಯ (ವಿಜೆಡಿ ಪದ್ಧತಿ)

ಬಂಗಾಳ: 50 ಓವರ್‌ಗಳಲ್ಲಿ 8ಕ್ಕೆ 264 (ಶ್ರೀವತ್ಸ ಗೋಸ್ವಾಮಿ 45, ಸುದೀಪ್ ಚಟರ್ಜಿ 27, ಋತ್ವಿಕ್ ಚೌಧರಿ 32, ಸುಮಂತ್ ಗುಪ್ತಾ 22, ಶಾಬಾಜ್ ಅಹಮದ್ ಔಟಾಗದೆ 85, ಸುಬೋಧ್ ಭಾಟಿ 70ಕ್ಕೆ3, ಭರತ್ ಶರ್ಮಾ 45ಕ್ಕೆ2, ಸಾಗರ್ ಉದೇಶಿ 44ಕ್ಕೆ2) ಪುದುಚೇರಿ: 30 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 132 (ಪವನ್ ದೇಶಪಾಂಡೆ ಔಟಾಗದೆ 62, ಪರಸ್ ಡೋಗ್ರಾ ಔಟಾಗದೆ 41. ಮುಕೇಶ್ ಕುಮಾರ್ 17ಕ್ಕೆ1, ಶಾಬಾಜ್ ಅಹಮದ್ 15ಕ್ಕೆ1) ಫಲಿತಾಂಶ: ಪುದುಚೇರಿ ತಂಡಕ್ಕೆ 8 ರನ್‌ಗಳ ಜಯ (ವಿಜೆಡಿ ಪದ್ಧತಿ)

ರಾಜ್‌ಕೋಟ್:ಡಿ ಗುಂಪು: ಛತ್ತೀಸಗಡ: 50 ಓವರ್‌ಗಳಲ್ಲಿ 7ಕ್ಕೆ 275 (ಆಶುತೋಷ್ 33, ಅಮನದೀಪ್ ಖರೆ 82, ಶಶಾಂಕ್ ಸಿಂಗ್ 63, ಅಜಯ್ ಮಂಡಲ್ 28, ಶುಭಂ ಅಗರವಾಲ್ ಔಟಾಗದೆ 22, ಮುಖೇಶ್ ಚೌಧರಿ 67ಕ್ಕೆ4, ತ್ರಿಪಾಠಿ 25ಕ್ಕೆ2) ಮಹಾರಾಷ್ಟ್ರ: 47 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 276 (ಋತುರಾಜ್ ಗಾಯಕವಾಡ್ ಔಟಾಗದೆ 154, ಯಶ್ ನೆಹರ್ 52, ನೌಶಾದ್ ಶೇಖ್ 37, ರಾಹುಲ್ ತ್ರಿಪಾಠಿ ಔಟಾಗದೆ 23, ಅಜಯ್ ಜಾಧವ್ ಮಂಡಲ 47ಕ್ಕೆ2) ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ 8 ವಿಕೆಟ್ ಜಯ.

ಮಧ್ಯಪ್ರದೇಶ: 50 ಓವರ್‌ಗಳಲ್ಲಿ 9ಕ್ಕೆ 329 (ಅಭಿಷೇಕ್ ಭಂಡಾರಿ 49, ರಜತ್ ಪಾಟೀದಾರ್ 49, ವೆಂಕಟೇಶ್ ಅಯ್ಯರ್ 112, ಶುಭಂ ಶರ್ಮಾ 82, ವಿಷ್ಣು ವಿನೋದ್ 59ಕ್ಕೆ3, ಬಾಸಿಲ್ ಥಂಪಿ 62ಕ್ಕೆ2), ಕೇರಳ: 49.4 ಓವರ್‌ಗಳಲ್ಲಿ 289 (ರೋಹನ್ ಕುನ್ನುಮ್ಮಳ 66, ಮೊಹಮ್ಮದ್ ಅಜರುದ್ದೀನ್ 34, ಸಚಿನ್ ಬೇಬಿ 66, ಜಲಜ್ ಸಕ್ಸೆನಾ 34, ಪುನೀತ್ ದಾತೆ 59ಕ್ಕೆ4, ವೆಂಕಟೇಶ್ ಅಯ್ಯರ್ 55ಕ್ಕೆ3) ಫಲಿತಾಂಶ: ಮಧ್ಯಪ್ರದೇಶಕ್ಕೆ 40 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT