ಕೊಲಂಬೊ: ಕ್ರಿಕೆಟ್ ಶ್ರೀಲಂಕಾವು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟೆನ್ ಅವರನ್ನು ತನ್ನ ತಂಡಕ್ಕೆ ನೂತನ ಕೋಚ್ ಆಗಿ ಸೋಮವಾರ ನೇಮಕ ಮಾಡಿದೆ. ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡ ಬೇಗನೇ ನಿರ್ಗಮಿಸಿದ ಕಾರಣ ಸನತ್ ಜಯಸೂರ್ಯ ಅವರು ಕೋಚ್ ಹುದ್ದೆ ತೊರೆದಿದ್ದರು.

ಕರ್ಸ್ಟೆನ್ ಅವರ ಎರಡು ವರ್ಷಗಳ ಒಪ್ಪಂದದ ಅವಧಿ ಏ. 15ರಂದು ಆರಂಭವಾಗಲಿದೆ. ಜಯಸೂರ್ಯ ಅವರ ಅವಧಿ ಜೂನ್ ಕೊನೆಯವರೆಗೆ ಇತ್ತು. ಕರ್ಸ್ಟೆನ್ ಅವರು 2008 ರಿಂದ 2011ರವರೆಗೆ ಭಾರತ ತಂಡದ ಕೋಚ್ ಆಗಿದ್ದರು. 2011 ರಿಂದ 2013ರವರೆಗೆ ದಕ್ಷಿಣ ಆಫ್ರಿಕಾ ತಂಡದ ತರಬೇತಿಯ ಹೊಣೆ ಹೊತ್ತಿದ್ದರು.

ರಾಷ್ಟ್ರೀಯ ಹೈಪರ್ಫಾರ್ಮನ್ಸ್ ಸೆಂಟರ್ನ ನಿರ್ದೇಶಕರಾಗಿ ತಾವು ಕಾರ್ಯನಿರ್ವಹಿಸುವುದಾಗಿ ಜಯಸೂರ್ಯ ಅವರು ಎಎಫ್ಪಿಗೆ ತಿಳಿಸಿದ್ದಾರೆ.

ಜಯಸೂರ್ಯ ಅವರು 2024ರ ಜುಲೈನಲ್ಲಿ ಕೋಚ್ ಆಗಿ ನೇಮಕಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.