ಶನಿವಾರ, ಜುಲೈ 24, 2021
27 °C

ಆಟಗಾರರ ಪೂರ್ವಸಿದ್ಧತೆಯೇ ಸವಾಲು: ವೆಂಕಿ ಮೈಸೂರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೀರ್ಘ ಕಾಲದ ಲಾಕ್‌ಡೌನ್ ನಂತರ ಕ್ರಿಕೆಟ್‌ಗೆ ಮರಳಲು ಆಟಗಾರರಿಗೆ ಪೂರ್ವ ಸಿದ್ಧತೆ ಮಾಡಿಸುವುದು ಪ್ರಮುಖ ಸವಾಲಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಿ ಮೈಸೂರು ಹೇಳಿದ್ದಾರೆ.

‘ಇದು ಅನಿರೀಕ್ಷಿತವಾದ ಸಮಯವಾಗಿದೆ. ತಂಡದ ನೆರವು ಸಿಬ್ಬಂದಿಯ ಮುಂದೆ ಈಗ ಗುರುತರವಾದ ಸವಾಲು ಇದೆ. ಆಟಗಾರರನ್ನು ಮರಳಿ ಸ್ಪರ್ಧಾತ್ಮಕ ಕ್ರಿಕೆಟ್‌ ಸಿದ್ಧಗೊಳಿಸುವ ಕುರಿತು ಚಿಂತನೆ ನಡೆಸಿದ್ದಾರೆ. ತಮ್ಮದೇ ಆದ ಯೋಜನೆಗಳೊಂದಿಗೆ ಕಣಕ್ಕಿಳಿಯಲು ಸಿದ್ಧರಾಗುತ್ತಿದ್ದಾರೆ’ ಎಂದು ವೆಂಕಿ ಎಫ್‌ಐಸಿಸಿಐ ವೆಬಿನಾರ್‌ನಲ್ಲಿ ಹೇಳಿದರು.

‘ನಮ್ಮ ತಂಡದಲ್ಲಿ ನೆರವು ಸಿಬ್ಬಂದಿಯು ಸನ್ನದ್ಧವಾಗಿದೆ. ಬಹಳಷ್ಟು ವಿಚಾರ ವಿನಿಮಯಗಳ ನಂತರ  ಆಟಗಾರರ ತರಬೇತಿಗೆ ಮತ್ತು ಪುನಶ್ಚೇತಕ್ಕೆ  ಉತ್ತಮ ಯೋಜನೆ ರೂಪುಗೊಂಡಿದೆ. ಕೆಲವು ನಿಬಂಧನೆಗಳು ಇರುವ ಕಾರಣ ಇತಿಮಿತಿಯಲ್ಲಿಯೇ ತರಬೇತಿ ಯೋಜನೆಯನ್ನು ಜಾರಿಗೊಳಿಸಲು ಆದ್ಯತೆ ನೀಡಲಾಗಿದೆ. ಉದಾಹರಣೆಗೆ  ಜಿಮ್ನಾಷಿಯಂ ತೆರೆಯಲು ಅನುಮತಿ ಇಲ್ಲ. ಆದ್ದರಿಂದ ವ್ಯಾಯಾಮಗಳಿಗೆ ಪರ್ಯಾಯ ಕ್ರಮದ ಬಗ್ಗೆ ಚಿಂತಿಸಲಾಗಿದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು