ಜೈಪುರ: ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಶತಕದ ಜೊತೆಯಾಟದ ಬಳಿಕ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಕೈಚಳಕ ತೋರಿದರು. ಇದರಿಂದಾಗಿ ಗುಜರಾತ್ ಟೈಟನ್ಸ್ ತಂಡವು ಐಪಿಎಲ್ನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಗುಜರಾತ್ ತಂಡವು 77 ರನ್ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ನಿರಾಯಾಸವಾಗಿ ಮಣಿಸಿತು. ಐಪಿಎಲ್ನಲ್ಲಿ ಟೈಟನ್ಸ್ಗೆ ಇದು ರನ್ ಆಧಾರದಲ್ಲಿ ಅತಿದೊಡ್ಡ ಗೆಲುವಾಗಿದೆ. ಸತತ ಎರಡನೇ ಪಂದ್ಯ ಸೋತ ರಾಜಸ್ಥಾನ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಿದೆ.

ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಗಿಲ್ (84;44ಎ) ಮತ್ತು ಸುದರ್ಶನ್ (55;36ಎ) ಅವರ ಅರ್ಧಶತಕಗಳ ನೆರವಿನಿಂದ ಗುಜರಾತ್ ತಂಡವು 4 ವಿಕೆಟ್ಗೆ 229 ರನ್ಗಳ ಭಾರಿ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು ರಶೀದ್ (33ಕ್ಕೆ 4), ಜೇಸನ್ ಹೋಲ್ಡರ್ (13ಕ್ಕೆ 3) ಮತ್ತು ಕಗಿಸೊ ರಬಾಡ (33ಕ್ಕೆ 2) ದಾಳಿಗೆ ತತ್ತರಿಸಿತು. ಹೀಗಾಗಿ, 16.3 ಓವರ್ಗಳಲ್ಲಿ 152 ರನ್ ಗಳಿಸಿ ಹೋರಾಟ ಮುಗಿಸಿತು.

ವೈಭವ್ ಸೂರ್ಯವಂಶಿ (36;16ಎ) ಯಥಾಪ್ರಕಾರ ಈ ಪಂದ್ಯದಲ್ಲಿ ಅಬ್ಬರಿಸಿ, ರಾಜಸ್ಥಾನ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅವರು ಯಶಸ್ವಿ ಜೈಸ್ವಾಲ್ (3) ಅವರೊಂದಿಗೆ ಮೊದಲ ವಿಕೆಟ್ಗೆ 17 ಎಸೆತಗಳಲ್ಲಿ 38 ರನ್ ಸೇರಿಸಿದರು. ರಬಾಡ ಓವರ್ನಲ್ಲಿ ಸತತ ಎರಡು ಸಿಕ್ಸರ್ ಬಾರಿಸಿ ಆಟಕ್ಕೆ ಕುದುರಿಕೊಂಡ ವೈಭವ್ ಅವರ ವಿಕೆಟನ್ನು ಮೊಹಮ್ಮದ್ ಸಿರಾಜ್ ಗಳಿಸಿ, ಆಕ್ರೋಶಭರಿತರಾಗಿ ಸಂಭ್ರಮಿಸಿದರು. ನಂತರದಲ್ಲಿ ಗುಜರಾತ್ ಬೌಲರ್ಗಳದ್ದೇ ಕಾರುಬಾರು. ಈ ಮಧ್ಯೆ ವಿಕೆಟ್ ಕೀಪರ್ ಧ್ರುವ ಜುರೇಲ್ (24) ಮತ್ತು ರವೀಂದ್ರ ಜಡೇಜ (38;25ಎ) ಕೊಂಚ ಹೋರಾಟ ತೋರಿದರು.

ಗಿಲ್ ಅಬ್ಬರ: ಎಡಗಾಲಿಗೆ ಪೆಟ್ಟುಬಿದ್ದರೂ ಅಮೋಘ ಆಟವಾಡಿದ ಗಿಲ್ ಅವರು ಸುದರ್ಶನ್ ಅವರೊಂದಿಗೆ ಮೊದಲ ವಿಕೆಟ್ಗೆ 65 ಎಸೆತಗಳಲ್ಲಿ 118 ರನ್ ಸೇರಿಸಿದರು. ಗಿಲ್ ಒಂಬತ್ತು ಬೌಂಡರಿಗಳ ಜೊತೆ ಮೂರು ಸಿಕ್ಸರ್ಗಳನ್ನು ಸಿಡಿಸಿದರು. ಅವರಿಗೆ ಇದು ಹಾಲಿ ಆವೃತ್ತಿಯಲ್ಲಿ ನಾಲ್ಕನೇ ಅರ್ಧ ಶತಕ.

ಜೋಫ್ರಾ ಆರ್ಚರ್ ಮೊದಲ ಓವರಿನಲ್ಲೇ ಅನಪೇಕ್ಷಿತ ದಾಖಲೆಗೆ ಪಾತ್ರರಾಗಬೇಕಾಯಿತು. ಅವರು 4 ವೈಡ್, 1 ನೋಬಾಲ್ ಸೇರಿ 11 ಎಸೆತಗಳನ್ನು ಮಾಡಿದರು. ಐಪಿಎಲ್ ಪಂದ್ಯದ ಮೊದಲ ಓವರಿನಲ್ಲೇ ಬೌಲರ್ ಒಬ್ಬರು ಇಷ್ಟೊಂದು ಎಸೆತಗಳನ್ನು ಮಾಡಿದ್ದು ದಾಖಲೆ. ಇದರಲ್ಲಿ 18 ರನ್ ಸೇರಿ ಅವರ ಮೂರು ಓವರುಗಳಲ್ಲಿ 46 ರನ್ಗಳು ಸೂರೆಯಾದವು.

ಕನ್ನಡಿಗ ಲೆಗ್ಸ್ಪಿನ್ನರ್ ಯಶರಾಜ್ ಪೂಂಜಾ 11ನೇ ಓವರಿನಲ್ಲಿ ಜೊತೆಯಾಟ ಮುರಿದರು. ಟೈಟನ್ಸ್ನ ಮಧ್ಯಮ ಕ್ರಮಾಂಕದ ಆಟಗಾರರಾದ ಜೋಸ್ ಬಟ್ಲರ್ ಮತ್ತು ಜೇಸನ್ ಹೋಲ್ಡರ್ ವಿಫಲರಾದರು. ಆದರೆ ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ (ಔಟಾಗದೇ 37; 20 ಎ) ಮತ್ತು ರಾಹುಲ್ ತೆವಾಟಿಯಾ (ಔಟಾಗದೇ 14; 4ಎ) ಅವರು ಮೊತ್ತವನ್ನು 225 ದಾಟಿಸಿದರು. ಇದು ಈ ಋತುವಿನಲ್ಲಿ ಟೈಟನ್ಸ್ ದಾಖಲಿಸಿದ ಅತ್ಯಧಿಕ ಮೊತ್ತ.

ಸಂಕ್ಷಿಪ್ತ ಸ್ಕೋರು: ಗುಜರಾತ್ ಟೈಟನ್ಸ್: 20 ಓವರ್ಗಳಲ್ಲಿ 4 ವಿಕೆಟ್ಗೆ 229 (ಸಾಯಿ ಸುದರ್ಶನ್ 55, ಶುಭಮನ್ ಗಿಲ್ 84, ವಾಷಿಂಗ್ಟನ್ ಸುಂದರ್ ಔಟಾಗದೇ 37; ಬ್ರಿಜೇಶ್ ಶರ್ಮಾ 47ಕ್ಕೆ2).

ರಾಜಸ್ಥಾನ ರಾಯಲ್ಸ್: 16.3 ಓವರ್ಗಳಲ್ಲಿ 152 (ವೈಭವ್ ಸೂರ್ಯವಂಶಿ 36, ಧ್ರುವ್ ಜುರೇಲ್ 24, ರವೀಂದ್ರ ಜಡೇಜ 38; ರಶೀದ್ ಖಾನ್ 33ಕ್ಕೆ4, ಜೇಸನ್ ಹೋಲ್ಡರ್ 12ಕ್ಕೆ3, ಕಗಿಸೊ ರಬಾಡ 33ಕ್ಕೆ2). ಪಂದ್ಯದ ಆಟಗಾರ: ರಶೀದ್ ಖಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.