ಬೆಂಗಳೂರು: ಕೇದಾರನಾಥ್ ಮುದ್ದಾ ಅವರು ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಬಿಜಿಸಿ ಸೀನಿಯರ್ ಸಿಟಿಜನ್ ಗಾಲ್ಫ್ ಟೂರ್ನಿಯಲ್ಲಿ 60–65 ವರ್ಷದೊಳಗಿನ ಪುರುಷರ ವಿಭಾಗದ ಪ್ರಶಸ್ತಿ ಜಯಿಸಿತು.
ಈ ವಿಭಾಗದ ಸ್ಪರ್ಧೆಯಲ್ಲಿ ಅವರು 37 ಅಂಕ ಗಳಿಸಿದರು. ಗಣಪ ಶ್ರೀನಿವಾಸರಾವ್ ಹಾಗೂ ಬಿ. ಪ್ರದೀಪ್ ಅವರನ್ನು ಹಿಂದಿಕ್ಕಿ ಪ್ರಥಮರಾದರು.
ಮಹಿಳಾ ವಿಭಾಗದ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ಸ್ಪರ್ಧೆಯಲ್ಲಿ ಜಯಂತಿ ರವಿ ಮೊದಲ ಸ್ಥಾನ ಗಳಿಸಿದರು. ಅವರು 41 ಅಂಕಗಳನ್ನು ಗಳಿಸಿದರು.
ಫಲಿತಾಂಶಗಳು: ಪುರುಷರು: 60–65 ವರ್ಷ: ಕೇದಾರನಾಥ್ ಮುದ್ದಾ –1, ಗಣಪ ಶ್ರೀನಿವಾಸರಾವ್ –2, ಬಿ ಪ್ರದೀಪ್ –3. 66–70 ವರ್ಷ: ಬಿ. ತ್ಯಾಗರಾಜನ್ –1, ವಿ.ಟಿ. ಆನಂದ್ –2. 71–75 ವರ್ಷ: ಮೋತಿಲಾಲ್ ಕಟಾರೆ –1, ಡಿ.ಪಿ. ನಾಗನಂದ–2, ಕೆ.ಎಂ. ನಾಯರ್ –3. 76–80 ವರ್ಷ: ಸುಭಾಷ್ ಗುಪ್ತಾ–1, ಕೆ.ಆರ್. ಶೇಷಾದ್ರಿ –2, 81 ವರ್ಷ ಮೇಲ್ಪಟ್ಟವರು: ರಾಜಾ ವಿಶ್ವನಾಥ್ –1, ಪಿ.ಜಿ. ಕೆ ಮೂರ್ತಿ –2.
ಮಹಿಳೆಯರು: 60 ವರ್ಷ ಮೇಲಿನವರು: ಜಯಂತಿ ರವಿ –1, ಆಶಾ ಪಾಟೀಲ –2.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.