ಶನಿವಾರ, ಏಪ್ರಿಲ್ 1, 2023
32 °C

ಬಾರ್ಡರ್‌– ಗಾವಸ್ಕರ್‌ ಟೆಸ್ಟ್‌: ಮೊದಲ ಟೆಸ್ಟ್‌ಗೆ ಗ್ರೀನ್‌, ಸ್ಟಾರ್ಕ್‌ ಅಲಭ್ಯ?

ಪಿಟಿಐ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್‌ ಕ್ಯಾಮರಾನ್ ಗ್ರೀನ್‌ ಮತ್ತು ವೇಗದ ಬೌಲರ್‌ ಮಿಚೆಲ್ ಸ್ಟಾರ್ಕ್‌ ಅವರು ಭಾರತದಲ್ಲಿ ನಡೆಯಲಿರುವ ಬಾರ್ಡರ್‌– ಗಾವಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ‘ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯದ ವೇಳೆ ಇವರಿಬ್ಬರೂ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದರು. ಗ್ರೀನ್‌ ಅವರ ಗಾಯಕ್ಕೆ ಶಸ್ತ್ರಕ್ರಿಯೆ ಬೇಕಿದ್ದು,  ಫೆ.9 ರಂದು ಆರಂಭವಾಗಲಿರುವ ಮೊದಲ ಟೆಸ್ಟ್‌ ವೇಳೆಗೆ ಗುಣಮುಖರಾಗುವ ಸಾಧ್ಯತೆ ಕಡಿಮೆ. ಸ್ಟಾರ್ಕ್‌ ಅವರಿಗೂ ಫಿಟ್‌ನೆಸ್‌ ಮರಳಿ ಪಡೆಯಲು ಇನ್ನಷ್ಟು ದಿನಗಳು ಬೇಕು ಎಂದು ತಂಡದ ಮೂಲಗಳು ತಿಳಿಸಿವೆ.

ದಕ್ಷಿಣ ಆಫ್ರಿಕಾ ವಿರುದ್ಧ ಸಿಡ್ನಿಯಲ್ಲಿ ನಡೆಲಿರುವ ಮೂರನೇ ಟೆಸ್ಟ್‌ ಪಂದ್ಯಕ್ಕೆ ಇಬ್ಬರೂ ಈಗಾಗಲೇ ಅಲಭ್ಯರಾಗಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು